ADVERTISEMENT

ಶಿರಸಿ: ತಾಲ್ಲೂಕಿನಾದ್ಯಂತ ಬೆಳಿಗ್ಗೆಯಿಂದಲೇ ಮಳೆ, ರಸ್ತೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 6:23 IST
Last Updated 17 ಜೂನ್ 2020, 6:23 IST
ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಯಲ್ಲಾಪುರ ನಾಕಾ ಸಮೀಪ ರಸ್ತೆಯ ಮೇಲೆ ನೀರು ನಿಂತಿರುವುದು
ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಯಲ್ಲಾಪುರ ನಾಕಾ ಸಮೀಪ ರಸ್ತೆಯ ಮೇಲೆ ನೀರು ನಿಂತಿರುವುದು   
""

ಶಿರಸಿ: ತಾಲ್ಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಎಡೆಬಿಡದೇ ಮಳೆಯಾಗುತ್ತಿದೆ. ದಟ್ಟ‌ ಮೋಡ ಕವಿದ ವಾತಾವರಣವು, ಇನ್ನೂ ಬೆಳಗಿನ ಜಾವದಂತೆ ಭಾಸವಾಗುತ್ತಿದೆ.

ಶಿರಸಿ-ಯಲ್ಲಾಪುರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಯಲ್ಲಾಪುರ ನಾಕಾ‌ ಸಮೀಪ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರಡಾದುವಂತಾಗಿದೆ.

'ರಸ್ತೆಯಲ್ಲಿ ನಿಂತಿರುವ ನೀರು ಮನೆಗಳಿಗೆ ನುಗ್ಗಬಹುದೆಂದು ರಾತ್ರಿಯಿಡೀ ನಿದ್ದೆಯಿಲ್ಲದೇ ಕಳೆದೆವು' ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ADVERTISEMENT

ಗ್ರಾಮೀಣ‌ ಭಾಗದಲ್ಲಿ ಹಳ್ಳಗಳು ಹರಿಯುತ್ತಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಮೈ ಕೊರೆಯುವ ಚಳಿಯ ಅನುಭವವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.