ADVERTISEMENT

ಬಂದರು ವಿಸ್ತರಣೆ ಪುನರ್ವಿಮರ್ಶೆಯಾಗಲಿ: ಸ್ವರ್ಣವಲ್ಲಿ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 12:17 IST
Last Updated 27 ಜನವರಿ 2020, 12:17 IST
ಸ್ವರ್ಣವಲ್ಲಿ ಸ್ವಾಮೀಜಿ
ಸ್ವರ್ಣವಲ್ಲಿ ಸ್ವಾಮೀಜಿ   

ಶಿರಸಿ: ಕಾರವಾರ ಬಂದರು ವಿಸ್ತರಣಾ ಯೋಜನೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪುನರ್ ವಿಮರ್ಶೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ಕಾರವಾರ ಬಂದರು ವಿಸ್ತರಣಾ ಯೋಜನೆ ಬಗ್ಗೆ ಮೀನುಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಮೀನುಗಾರರ ಬುದುಕಿಗೆ ಈ ಯೋಜನೆಯಿಂದ ತೀವ್ರ ತೊಂದರೆ ಆಗಲಿದೆ ಎಂದು ನಿರಂತರ ಸತ್ಯಾಗ್ರಹ, ಚಳವಳಿ ನಡೆಸುತ್ತಿದ್ದಾರೆ. ಕಾರವಾರದ ನಾಗರಿಕರು ಸಹ ಬಂದರು ವಿಸ್ತರಣಾ ಯೋಜನೆ ಅಸಾಧು, ಅವ್ಯವಹಾರಿಕ ಎಂದು ವಿರೋಧ ವ್ಯಕ್ತಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಪುನರ್ ವಿಮರ್ಶೆ ನಡೆಸಬೇಕು’ ಎಂದು ತಿಳಿಸಿದ್ದಾರೆ.

ಅಭಿವೃದ್ಧಿ ಯೋಜನೆಗಳು ಮೀನುಗಾರರ ಬದುಕಿಗೆ ತೊಂದರೆ ತರಬಾರದು. ಕರಾವಳಿ ಪ್ರದೇಶದ ರೈತರು, ಮೀನುಗಾರರ ಹಿತರಕ್ಷಣೆ ಜೊತೆಗೆ ಅಭಿವೃದ್ಧಿ ಯೋಜನೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.