ADVERTISEMENT

‘ಅಮೃತ ಸ್ವಾತಂತ್ರ್ಯ’: ಮಾಜಿ ಯೋಧನಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:27 IST
Last Updated 15 ಆಗಸ್ಟ್ 2022, 16:27 IST
ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ, ಕಾರವಾರದ ನಿವಾಸಿ, ಮಾಜಿ ಯೋಧ ಕಶ್ಮೀರ್ ಫಿಲಿಪ್ ರೊಸಾರಿಯೋ ಅವರನ್ನು ಸೋಮವಾರ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು. ಮಾಧವ ನಾಯಕ, ಸ್ಯಾಮ್ಸನ್ ಡಿಸೋಜಾ ಇದ್ದಾರೆ.
ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ, ಕಾರವಾರದ ನಿವಾಸಿ, ಮಾಜಿ ಯೋಧ ಕಶ್ಮೀರ್ ಫಿಲಿಪ್ ರೊಸಾರಿಯೋ ಅವರನ್ನು ಸೋಮವಾರ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು. ಮಾಧವ ನಾಯಕ, ಸ್ಯಾಮ್ಸನ್ ಡಿಸೋಜಾ ಇದ್ದಾರೆ.   

ಕಾರವಾರ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ನಗರದ ನಿವಾಸಿ, ಮಾಜಿ ಯೋಧ ಕಶ್ಮೀರ್ ಫಿಲಿಪ್ ರೊಸಾರಿಯೋ ಅವರನ್ನು ಸೋಮವಾರ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು.

1932ರಲ್ಲಿ ಜನಿಸಿದ್ದ ಕಶ್ಮೀರ್ ಅವರಿಗೆ ಈಗ 90 ವರ್ಷ. 1947ರಲ್ಲಿ ಅವರು ಭೂಸೇನೆಗೆ ಸಿಪಾಯಿಯಾಗಿ ನೇಮಕಾತಿಯಾದಾಗ ಅವರಿಗೆ 15 ವರ್ಷ. 25 ವರ್ಷ ಸೇವೆ ಸಲ್ಲಿಸಿ 1972ರಲ್ಲಿ ನಿವೃತ್ತಿ ಹೊಂದಿದರು. ಕಾಶ್ಮೀರದಿಂದ ಚಂಡೀಗಢದವರೆಗೆ ಹಲವು ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 1971ರಲ್ಲಿ ಭಾರತ- ಪಾಕ್ ಯುದ್ಧದ ಸಂದರ್ಭ ಆರ್ಮಿ ಯುನಿಟ್‌ನಲ್ಲಿದ್ದರು.

ದೇಶದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ, ನಗರದ ಜೆ.ಇ.ಒ ಮಿಲ್ ರಸ್ತೆಯಲ್ಲಿರುವ ಅವರ ಮನೆಗೆ ತೆರಳಿದ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು ಸನ್ಮಾನಿಸಿದರು.

ADVERTISEMENT

ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಮದರ್ ಥೆರೆಸಾ ಸಂಸ್ಥೆಯ ಸ್ಯಾಮ್ಸನ್ ಡಿಸೋಜಾ, ಸಿರಿಲ್ ಗೊನ್ಸಾಲಿಸ್, ಐರಿನ್ ಗೊನ್ಸಾಲಿಸ್, ಸ್ಯಾಮ್ಸನ್ ಡಿಸೋಜಾ, ಪ್ರಮುಖರಾದ ರಾಜೀವ ನಾಯ್ಕ, ಸಿ.ಎನ್.ನಾಯ್ಕ, ಸುರೇಶ ನಾಯ್ಕ, ಕಾಶೀನಾಥ ನಾಯ್ಕ, ಖೈರುನ್ನೀಸಾ ಶೇಖ್, ಸೂರಜ್ ಕುರುಮಕರ್, ಕಶ್ಮೀರ್ ಅವರ ಪುತ್ರಿ ರೋಸೆಡಾ, ಅಳಿಯ ಡೆರೆಲ್, ಮೊಮ್ಮಕ್ಕಳಾದ ಡೆಲ್ಸಿಯಾ, ಎನಾಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.