ADVERTISEMENT

ಯುವತಿಯ ವಿಡಿಯೊ ಮಾಡಿದ ಆರೋಪ: ರೂಂ ಬಾಯ್‌ಗೆ ಥಳಿತ

​ಪ್ರಜಾವಾಣಿ ವಾರ್ತೆ
Published 11 ಮೇ 2019, 14:34 IST
Last Updated 11 ಮೇ 2019, 14:34 IST

ಭಟ್ಕಳ:ವಸತಿಗೃಹವೊಂದರರೂಂ ಬಾಯ್, ಬಿಸಿನೀರಿನ ಗೀಸರ್ ಸ್ವಿಚ್ ಆನ್ ಮಾಡಲು ಸ್ನಾನದಕೋಣೆಯ ಹೊರಗೆ ಬಂದಿದ್ದ. ಆದರೆ ಆತ, ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಎಂದು ಅನುಮಾನಪಟ್ಟ ಸಂಬಂಧಿಕರು ಹಿಗ್ಗಾಮುಗ್ಗ ಥಳಿಸಿದರು. ಅಲ್ಲೇ ಇದ್ದ ಮತ್ತಿಬ್ಬರು ರೂಂ ಬಾಯ್‌ಗಳಿಗೂ ಹೊಡೆದರು.

ಸಮೀಪದ ಮುರ್ಡೇಶ್ವರದವಸತಿಗೃಹವೊಂದರಲ್ಲಿ ರೂಂಬಾಯ್‌ಗಳಿಗೆ ಪ್ರವಾಸಿಗರ ಕುಟುಂಬ ಶುಕ್ರವಾರ ಥಳಿಸಿತು. ಪ್ರವಾಸಿಗರು ಸಮುದ್ರ ಸ್ನಾನ ಮಾಡಿ ಬಂದು ವಸತಿಗೃಹದಲ್ಲಿ ಸ್ನಾನ ಮಾಡುತ್ತಿದ್ದರು. ಅಲ್ಲಿಗೆ ಬಂದ ವಸತಿಗೃಹದ ರೂಂ ಬಾಯ್ ಒಬ್ಬ ಕೊಠಡಿಯ ಮೇಲ್ಭಾಗಕ್ಕೆ ಹೋಗಿದ್ದ. ಇದನ್ನು ಗಮನಿಸಿದ ಮತ್ತೊಬ್ಬಳುಯುವತಿ ಕುಟುಂಬದವರಿಗೆ ತಿಳಿಸಿದಳು. ನಂತರ ಎಲ್ಲರೂ ಸೇರಿ ರೂಂ ಬಾಯ್‌ಗೆ ಥಳಿಸಿದರು.

ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮೊಬೈಲ್ ಪರೀಕ್ಷಿಸಿದರು. ಆದರೆ, ಅದರಲ್ಲಿ ಯುವತಿಯರು ಸ್ನಾನ ಮಾಡುತ್ತಿದ್ದ ಯಾವುದೇ ವಿಡಿಯೊ ಇರಲಿಲ್ಲ.

ADVERTISEMENT

‘ಆತ ವಸತಿಗೃಹದಲ್ಲಿ ಯುವತಿಯರು ಸ್ನಾನ ಮಾಡುವಾಗ ಬಿಸಿನೀರಿನ ಸ್ವಿಚ್‌ ಆನ್ ಮಾಡಲುಮೇಲೆ ಹತ್ತಿದ್ದ. ಅದನ್ನು ಕಂಡ ಯುವತಿಯೊಬ್ಬಳು ವಿಡಿಯೊ ಮಾಡಿದ್ದಾಗಿತಪ್ಪಾಗಿ ತಿಳಿದಳು. ಇದುವೇ ಅವಾಂತರಕ್ಕೆ ಕಾರಣವಾಯಿತು ಎಂದು ವಸತಿಗೃಹದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಎಲ್ಲರನ್ನೂ ಸಮಾಧಾನ ಮಾಡಿ ಕಳುಹಿಸಲಾಯಿತು’ ಎಂದು ಮುರ್ಡೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.