
ಮುಂಡಗೋಡ (ಉತ್ತರ ಕನ್ನಡ): ‘ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಅವರ ಈ ಭಾಗದಲ್ಲಿನ ಓಡಾಟ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.6ರ ಡ್ರೆಪುಂಗ್ ಗೋಮಾಂಗ್ ಬೌದ್ಧಮಂದಿರದಲ್ಲಿ ಗುರುವಾರ ದಲೈಲಾಮಾ ಅವರನ್ನು ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆ ಮಾಡುವುದು ಸರಿಯಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷ ಬೆಳವಣಿಗೆಯಲ್ಲಿ ಅವರ ಸಹಕಾರವಿದೆ. ಅವರಿಗೂ ಉಜ್ವಲವಾದ ಭವಿಷ್ಯವಿದೆ. ಸ್ವಲ್ಪ ಕಾಯಬೇಕು ಅಷ್ಟೆ’ ಎಂದರು.
‘ಸಿಎಂ., ಡಿಸಿಎಂ., ನಡುವೆ ಅಧಿಕಾರ ಹಂಚಿಕೆಯ ಸಂಬಂಧ ಒಪ್ಪಂದದ ಬಗ್ಗೆ ನಾನೇನೂ ಹೇಳಲು ಆಗುವುದಿಲ್ಲ. ಸಚಿವ ಸಂಪುಟದ ಪುನರ್ ರಚನೆಗೆ ಯೋಗ, ಸಮಯ ಕೂಡಿಬರಬೇಕು’ ಎಂದರು.