ADVERTISEMENT

ಐಷಾರಾಮಿ ಕಾರಿನಲ್ಲಿ ಬಂದು ಶ್ರೀಗಂಧ ಮರ ಕದಿಯುತ್ತಿದ್ದರು!

ಜೊಯಿಡಾ: ಕಳ್ಳರನ್ನು ಬಂಧಿಸಿದ ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 2:01 IST
Last Updated 1 ಆಗಸ್ಟ್ 2019, 2:01 IST
   

ಜೊಯಿಡಾ: ತಾಲ್ಲೂಕಿನಲ್ಲಿ ಒಂದು ತಿಂಗಳಿಂದ ಶ್ರೀಗಂಧದ ಮರಗಳನ್ನು ಕತ್ತರಿಸಿ ಕದಿಯುತ್ತಿದ್ದ ಆರೋಪಿಗಳು ಕೊನೆಗೂ ಸೆರೆಸಿಕ್ಕಿದ್ದಾರೆ.ಆರೋಪಿಗಳು ಐಷಾರಾಮಿ ಕಾರಿನಲ್ಲಿ ಬಂದು ಕಳವು ಮಾಡುತ್ತಿದ್ದರು ಎಂದೂ ಗೊತ್ತಾಗಿದೆ.

ಬೆಳಗಾವಿ ಜಿಲ್ಲೆ ಖಾನಾ‍ಪುರದ ಕರಬನಹಟ್ಟಿಯ ಗಂಗಪ್ಪ ಯಮುನಪ್ಪ ಹಳಬ (32), ಕರಿಯಪ್ಪ ಯಲ್ಲಪ್ಪ ಹಳಬ (28), ಸೋಮನಾಥ ನಾಗಪ್ಪ ವಾಲೀಕರ (27), ನಂದಗಡದ ಪ್ರಮೋದ ಶ್ರೀಕಾಂತ ನಿಲಜಕರ (32) ಹಾಗೂ ಜೊಯಿಡಾದ ಪೀರನವಾಡಿಯ ಅಶೋಕ ದೊಂಡಿಬಾ ಬೇಡರ (45) ಬಂಧಿತರು.

ಆರೋಪಿಗಳು ಮಂಗಳವಾರ ತಡರಾತ್ರಿ ಇನ್ನೋವಾ ಕಾರಿನಲ್ಲಿಬರುತ್ತಿದ್ದ ಮಾಹಿತಿ ಪಡೆದ ಜೊಯಿಡಾ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಜೊಯಿಡಾ ಮತ್ತು ದಾಂಡೇಲಿ ಮಧ್ಯೆ ಅರಣ್ಯ ಪ್ರದೇಶದಲ್ಲಿ ಕಾರನ್ನು ತಡೆದು ಐವರು ಆರೋಪಿಗಳನ್ನು ಬಂಧಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಶ್ರೀಗಂಧದ ಮರ ಕಳವಿನಮೂರು ಪ್ರಕರಣಗಳು ದಾಖಲಾಗಿವೆ. ಜೊಯಿಡಾ ರಕ್ಷಿತಾರಣ್ಯದಲ್ಲಿ ಎರಡು ಹಾಗೂ ನಾಗೋಡಾ ಗ್ರಾಮದ ಹತ್ತಿರ ಇರುವ ಖಾಸಗಿ ಮಾಲೀಕತ್ವದ ಜಮೀನಿನಲ್ಲಿ ಮರಗಳನ್ನು ಕಳವು ಮಾಡಲಾಗಿತ್ತು. ಒಟ್ಟು ಆರುಶ್ರೀಗಂಧದ ಮರಗಳನ್ನು ಕತ್ತರಿಸಿ ಸಾಗಿಸಲಾಗಿತ್ತು.

ದಾಂಡೇಲಿ ಡಿವೈಎಸ್‌ಪಿಮೋಹನ ಪ್ರಸಾದ ಮಾರ್ಗದರ್ಶನದಲ್ಲಿ ಜೊಯಿಡಾ ಸಿಪಿಐ ರಮೇಶ ಹೂಗಾರ, ಜೊಯಿಡಾ ವಲಯ ಅರಣ್ಯಾಧಿಕಾರಿ ಮಹೀಮ್ ಜನ್ನು, ಪಿಎಸ್‌ಐ ಎ.ವೈ.ಕಾಂಬ್ಳೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.