ADVERTISEMENT

‘ಕರ್ನಾಟಕದ ಕಾರ್ಮಿಕರ ನೆರವಿಗೆ ಮುಂದಾಗಿ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 13:53 IST
Last Updated 4 ಏಪ್ರಿಲ್ 2020, 13:53 IST

ಕಾರವಾರ: ‘ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ ರಾಜ್ಯದ ಸುಮಾರು ಎರಡು ಸಾವಿರ ಕಾರ್ಮಿಕರು ಅಲ್ಲಿಂದ ಬರಲಾಗದೇ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವು ಅವರ ನೆರವಿಗೆ ಧಾವಿಸಬೇಕು’ ಎಂದು ಕಾಂಗ್ರೆಸ್ ಟಾಸ್ಕ್‌ಫೋರ್ಸ್ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಸೈಲ್ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಾಕ್‌ಡೌನ್ ಬಳಿಕ ಅಲ್ಲಿ ಸಿಲುಕಿರುವ ಕಾರ್ಮಿಕರುಉತ್ತರ ಕನ್ನಡ ಮೂಲದವರಾಗಿದ್ದಾರೆ. ಲಾಕ್‍ಡೌನ್ ಆಗಿದ್ದರೂ ಗೋವಾದ ದೋಣಿಗಳಿಂದ ಮೀನುಗಾರಿಕೆ ನಡೆಯುತ್ತಲೇ ಇದೆ. ಹಾಗಾಗಿ ನಮ್ಮ ಜಿಲ್ಲೆಯ ಕಾರ್ಮಿಕರು ಅಲ್ಲಿ ಅನಿವಾರ್ಯವಾಗಿ ದುಡಿಯುತ್ತಿದ್ದಾರೆ. ಕಾರ್ಮಿಕರಿಗೆ ಕೊರೊನಾ ವೈರಸ್ ಹರಡದಂತೆ ತಡೆಯಲು ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನೂ ದೋಣಿಗಳ ಮಾಲೀಕರು ಕೈಗೊಂಡಿಲ್ಲ’ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಿಂದಲೇ ಕಾರ್ಮಿಕರಿಗೆ ದೂರವಾಣಿ ಕರೆ ಮಾಡಿದ ಅವರು, ಸಮಸ್ಯೆಯನ್ನು ಕೇಳಿದರು. ಬಳಿಕ ನಗರದ ಬಿಲ್ಟ್ ವೃತ್ತದಬಳಿ ಶೆಡ್‌ನಲ್ಲಿ ವಾಸವಾಗಿರುವ, ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐ.ಆರ್‌.ಬಿಕಂಪನಿಯ ಕಾರ್ಮಿಕರ ಬಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಮಕ್ಬುಲ್ ಶೇಖ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.