ADVERTISEMENT

‘ಸಾಗರ ಕಣ್ಗಾವಲು’: ಕಾರವಾರದಲ್ಲಿ ತಪಾಸಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 16:30 IST
Last Updated 15 ನವೆಂಬರ್ 2022, 16:30 IST
‘ಸಾಗರ ಕಣ್ಗಾವಲು’ ಕಾರ್ಯಾಚರಣೆಯ ಭಾಗವಾಗಿ ಮಂಗಳವಾರ, ಕಾರವಾರದ ಬೈತಖೋಲ್ ಬಂದರಿನ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದರು
‘ಸಾಗರ ಕಣ್ಗಾವಲು’ ಕಾರ್ಯಾಚರಣೆಯ ಭಾಗವಾಗಿ ಮಂಗಳವಾರ, ಕಾರವಾರದ ಬೈತಖೋಲ್ ಬಂದರಿನ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದರು   

ಕಾರವಾರ: ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಜನಜಾಗೃತಿ ಅಭಿಯಾನದ ಭಾಗವಾಗಿ ನಗರದಲ್ಲಿ ಮಂಗಳವಾರ, ‘ಸಾಗರ ಕಣ್ಗಾವಲು’ (ಸೀ ವಿಜಿಲ್) ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು. ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆ ಸಿಬ್ಬಂದಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಂಯುಕ್ತವಾಗಿ ತಪಾಸಣೆ ನಡೆಸಿದರು.

ಬೈತಖೋಲ್ ಬಂದರು ರಸ್ತೆಯ ಸಮೀಪ, ಕಾಳಿ ನದಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾಗೂ ಶಿರವಾಡದ ರೈಲು ನಿಲ್ದಾಣ ಹತ್ತಿರ ಬ್ಯಾರಿಕೇಡ್‌ಗಳನ್ನು ಅಳವಡಿಸಿ ನಾಕಾಬಂದಿ ಹಾಕಲಾಗಿತ್ತು. ನಗರ ಪ್ರವೇಶಿಸುವ ವಾಹನಗಳನ್ನು ತಪಾಸಣೆ ನಡೆಸಿ ಕಾರ್ಯಾಚರಣೆಯ ಮಾಹಿತಿಯನ್ನು ನೀಡಲಾಯಿತು.

ಬೆಳಿಗ್ಗೆಯಿಂದಲೇ ಆರಂಭವಾದ ಕಾರ್ಯಾಚರಣೆಯು ಸಂಜೆಯ ತನಕ ನಡೆಯಿತು. ಶಿರವಾಡದಲ್ಲಿ ‘ನಕಲಿ ಬಾಂಬ್’ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸುವ ಅಣಕು ಕಾರ್ಯಾಚರಣೆ ಕೈಗೊಳ್ಳಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.