ADVERTISEMENT

`ಹೆಣ್ಣು ಮಗು ಉಳಿಸಿ' ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 17:07 IST
Last Updated 21 ಅಕ್ಟೋಬರ್ 2020, 17:07 IST

ಕುಮಟಾ: ಭಾರತೀಯ ವೈದ್ಯಕೀಯ ಸಂಸ್ಥೆಯ ರಾಜ್ಯ ಘಟಕ ನೀಡುವ 'ಹೆಣ್ಣು ಮಗು ಉಳಿಸಿ' ಪ್ರಶಸ್ತಿಗೆ ಸಂಸ್ಥೆಯ ಕುಮಟಾ ಘಟಕ ಆಯ್ಕೆಯಾಗಿದೆ ಎಂದು ಕುಮಟಾ ಘಟಕದ ಅಧ್ಯಕ್ಷೆ ಡಾ. ನಮೃತಾ ಶಾನಭಾಗ ತಿಳಿಸಿದರು.

ಸಂಸ್ಥೆ ವತಿಯಿಂದ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹದಿಹರೆಯ ಸಮಸ್ಯೆ ಹಾಗೂ ಪೌಷ್ಟಿಕ ಆಹಾರ ಅಗತ್ಯದ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ‘ಹೆಣ್ಣು ಮಗು ಉಳಿಸಿ’ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಜಾಥಾ, ಹೆಣ್ಣಿನ ಶೋಷಣೆ ನಿಲ್ಲಿಸಿ, ಹೆಣ್ಣು ಮಗುವೇ ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ನೋಡಿಕೊಳ್ಳುತ್ತದೆ ಸಂದೇಶ ಸಾರುವ ಬೀದಿ ನಾಟಕ ಪ್ರದರ್ಶನ ಕೂಡ ಕೈಕೊಳ್ಳಲಾಗಿತ್ತು.

ಈ ಎಲ್ಲ ಕಾರ್ಯಕ್ರಮಗಳನ್ನು ಗಮನಿಸಿ ಕುಮಟಾ ಘಟಕವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.