ಕುಮಟಾ: ಪಟ್ಟಣದ ವಿವೇಕನಗರದ ಮನೆಯೊಂದರಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದ ಮಹಿಳೆಗೆ ನಿವೃತ್ತಿ ನೀಡಿ, ಆರ್ಥಿಕ ನೆರವಿನೊಂದಿಗೆ ಮನೆಯವರೆಲ್ಲ ಬೀಳ್ಕೊಟ್ಟರು.
ದಯಾ ಹೆಗಡೆ ಹಾಗೂ ಗಣಪತಿ ಹೆಗಡೆ ದಂಪತಿ ಮನೆಯಲ್ಲಿ ಪುರಂದರಿ ನಾಯ್ಕ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರಿಗೆ 65 ವರ್ಷವಾದ ಕಾರಣ ಹೆಗಡೆ ದಂಪತಿ ಅವರಿಗೆ ನಿವೃತ್ತಿ ನೀಡಿ, ಸನ್ಮಾನಿಸಿ ಪ್ರೀತಿಯಿಂದ ಬೀಳ್ಕೊಟ್ಟರು.
‘25 ವರ್ಷಗಳ ಹಿಂದೆ ಪುರಂದರಿ ನಮ್ಮ ಮನೆಗೆ ಬಂದಾಗ ನಾನು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಮಕ್ಕಳು ಚಿಕ್ಕವರಾಗಿದ್ದರಿಂದ ನಿತ್ಯವೂ ಅವರ ಅಗತ್ಯತೆ ಪೂರೈಸಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗುವುದು ಕಷ್ಟವಾಗುತ್ತಿತ್ತು. ಪುರಂದರಿ ಬಂದ ಮೇಲೆ ಎಲ್ಲವೂ ನಿರಾಳವಾಯಿತು. ಆಕೆ ನನ್ನ ಮಕ್ಕಳಿಗೆ ತಾಯಿಯಂತೆ ಆರೈಕೆ ಮಾಡಿದರು’ ಎಂದು ದಯಾ ಹೆಗಡೆ ಭಾವುಕರಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.