
ಅಂಕೋಲಾ: ‘ಬದುಕಿನ ಸಾರ್ಥಕತೆಯನ್ನು ದಾನದಲ್ಲಿ ಕಾಣು ಎನ್ನುವ ತತ್ವವನ್ನೇ ಅಳವಡಿಸಿಕೊಂಡು ಅಲ್ಪ ಕಾಲದ ಬದುಕಿನಲ್ಲಿ ಶ್ರೇಷ್ಠ ಕಾರ್ಯಗಳನ್ನು ಮಾಡಿದ ಶಿರಸಂಗಿ ಲಿಂಗರಾಜರು ಎಂದಿಗೂ ಅಜರಾಮರರಾಗಿರುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ನಿರ್ಮಾಣಕ್ಕೆ ಅಂದಿನ ಕಾಲದಲ್ಲಿ ಅವರು ಮಾಡಿದ ದಾನ ಇಂದು ರಾಜ್ಯದಾದ್ಯಂತ ಕೆಎಲ್ಇ ಶಿಕ್ಷಣ ಸಂಸ್ಥೆ ಪಸರಿಸಲು ನಾಂದಿಯಾಯಿತು’ ಎಂದು ಶಿಕ್ಷಕ ಪ್ರವೀಣ ವಾಜರೆ ಹೇಳಿದರು.
ಪಟ್ಟಣದ ಕೆಎಲ್ಇ ಸಮೂಹ ಸಂಸ್ಥೆಯ ವತಿಯಿಂದ ನಡೆದ ತ್ಯಾಗವೀರ ಮಹಾದಾನಿ ಶಿರಸಂಗಿ ಲಿಂಗರಾಜರ 165ನೇ ಜಯಂತಿ ಕಾರ್ಯಕ್ರಮದಲ್ಲಿ ಲಿಂಗರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಡಿ.ಎಲ್.ಭಟ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಾವು ಮಾಡಿದ ದಾನ ಸಾರ್ವಕಾಲಿಕ ಸಾರ್ಥಕತೆಯ ದಾನವಾಗಬೇಕು ಎಂಬುದಕ್ಕೆ ಶಿರಸಂಗಿ ಲಿಂಗರಾಜರು ಸಾಕ್ಷಿಯಾಗಿದ್ದಾರೆ’ ಎಂದರು.
ಸಂಯೋಜಕ ಆರ್.ನಟರಾಜ್, ಆಡಳಿತ ಮಂಡಳಿಯ ಸದಸ್ಯ ಮಿನಲ್ ನಾರ್ವೇಕರ, ಪ್ರಾಚಾರ್ಯ ಸೋಮಶೇಖರ ನಾಯಕ, ಅಶ್ವಥನಾರಾಯಣ ಹೆಗಡೆ, ಡಾ.ವಿನಾಯಕ ಹೆಗಡೆ, ಡಾ.ಗಂಗಾಧರ ಇಸರಣ್ಣ, ಸರೋಜಿನಿ ಹಾರವಾಡೇಕರ, ಉಪನ್ಯಾಸಕಿ ಜಯಾ ಗಾಂವಕರ, ಡಾ.ಸ್ಮೀತಾ ಫಾತರಫೇಕರ, ತಿಮ್ಮಣ್ಣ ಭಟ್ ಇದ್ದರು.