ADVERTISEMENT

ಪೂವ೯ಜರಿಂದ ಬಂದ ಅರಣ್ಯವನ್ನು ಪೀಳಿಗೆಗೆ ಹಸ್ತಾಂತರಿಸಿ : ಶಾಸಕ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:59 IST
Last Updated 18 ಜನವರಿ 2026, 6:59 IST
ಯಲ್ಲಾಪುರದಲ್ಲಿ ನಡೆದ ದಿನಚರಿ ಬಿಡುಗಡೆ ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಶಾಂತಾರಾಮ ಸಿದ್ದಿ, ಹಷ೯ಭಾನು ಜಿ.ಪಿ.ಭಾಗವಹಿಸಿದ್ದರು
ಯಲ್ಲಾಪುರದಲ್ಲಿ ನಡೆದ ದಿನಚರಿ ಬಿಡುಗಡೆ ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಶಾಂತಾರಾಮ ಸಿದ್ದಿ, ಹಷ೯ಭಾನು ಜಿ.ಪಿ.ಭಾಗವಹಿಸಿದ್ದರು   

ಯಲ್ಲಾಪುರ: ʻನಮ್ಮ ಪೂರ್ವಜರು ಕಾಪಾಡಿಕೊಂಡು ಬಂದ ಸಮೃದ್ಧ ಅರಣ್ಯವನ್ನು ಉಳಿಸಿಕೊಂಡು, ಇನ್ನಷ್ಟು ಬೆಳೆಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆʼ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಪಟ್ಟಣದ ಅರಣ್ಯ ಇಲಾಖೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ 2026ನೆ ಸಾಲಿನ ದಿನಚರಿ ಹಾಗು ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾವ೯ಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಕತ೯ವ್ಯ ನಿವ೯ಹಿಸುವಂತೆ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಸಲಹೆ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ,ʻ ಅರಣ್ಯ ಇಲಾಖೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಜೇನು ತುಪ್ಪಕ್ಕೆ ಪೂರಕವಾಗಬಲ್ಲ ಹೂಗಿಡಗಳನ್ನು ಬೆಳೆಸಬೇಕಿದೆʼ ಎಂದರು.

ADVERTISEMENT

ಉಪ ಅರಣ್ಯ ಸಂರಕ್ಷಣಾಧಿಕಾರಿ ಹಷ೯ಭಾನು ಜಿ.ಪಿ.ಮಾತನಾಡಿ,ʻಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಉತ್ತಮ ದಿನಚರಿ ಅಳವಡಿಸಿಕೊಳ್ಳಬೇಕಿದೆʼ ಎಂದರು.

ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ವಿಭಾಗ ಅಧ್ಯಕ್ಷ ಮಂಜುನಾಥ ಎಂ. ಗೌಡ, ಎಸಿಎಫ್ ಹಿಮವತಿ ಭಟ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿರೇಶ್ ಕಬ್ಬಿನ್, ವಲಯ ಅರಣ್ಯಾಧಿಕಾರಿ ಪ್ರಸಾದ್ ಪೆಡ್ನೇಕರ್ ಇದ್ದರು.
ಸಂಜಯ್ ಬರಗೋಳಿ ಸ್ವಾಗತಿಸಿದರು. ಶೈಲಾ ಹೈನಾಪುರ ವಂದಿಸಿದರು. ವನಿತಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.