ಶಿರಸಿ: ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠ. ಹಾಗಾಗಿ ಅದು ಪಾವನ ಆಗಬೇಕಾದರೆ ಅನನ್ಯ ಭಕ್ತಿಯಿಂದ ದೇವರನ್ನು ಪೂಜಿಸಬೇಕು. ಏಕಾಗ್ರತೆಯಿಂದ ಭಗವಂತನ ಧ್ಯಾನ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಕರ್ಕಿ ದೈವಜ್ಞ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಅವರು ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಕ್ತಿಯೇ ಮುಕ್ತಿಗೆ ಕಾರಣ. ಅನನ್ಯ ಭಕ್ತಿಯಿಂದ ದೇವರನ್ನು ಆರಾಧಿಸಬೇಕು. ಮುಂದೆ ಮಾಡಿದರಾಯಿತು ಎಂದು ನಿರ್ಲಕ್ಷ ಮಾಡಬೇಡಿ. ಸಂಸಾರಿಗಳಾಗಿ ನಾವೇನು ಮಾಡುವುದು ಎನ್ನುವ ಉದಾಸೀನ ಬೇಡ. ಸಂಸಾರದಲ್ಲಿದ್ದೆ ಭಗವಂತನ ಧ್ಯಾನಕ್ಕೆ ಸಮಯ ಮೀಸಲಿಡಿ. ಜೀವನದಲ್ಲಿ ಸಮಸ್ಯೆ ಬರಬಹುದು. ಆ ಸಮಸ್ಯೆ ಎದುರಿಸಲು ಧೈರ್ಯ, ಶಕ್ತಿ ಆ ಭಗವಂತ ಕೊಡಬೇಕು. ಅದರಿಂದ ಹೊರಗೆ ಬರಲು ಅವನ ಆಶೀರ್ವಾದ ಬೇಕು. ಹಾಗಾಗಿ ಏಕಾಗ್ರತೆಯಿಂದ ದೇವರ ಧ್ಯಾನ ಮಾಡಿ. ಭಗವಂತನ ನಿರಂತರ ಸೇವೆಯಿಂದ ಜನ್ಮ ಸಾರ್ಥಕ ಆಗುತ್ತದೆ ಎಂದರು. ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.