ADVERTISEMENT

ಶಿರಸಿಯ ವಿಶ್ವ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 4:23 IST
Last Updated 25 ಫೆಬ್ರುವರಿ 2026, 4:23 IST
<div class="paragraphs"><p>ಮಾರಿಕಾಂಬಾ ಜಾತ್ರೆ ರಥೋತ್ಸವ</p></div>

ಮಾರಿಕಾಂಬಾ ಜಾತ್ರೆ ರಥೋತ್ಸವ

   

ಶಿರಸಿ: ಎರಡು ವರ್ಷಗಳಿಗೊಮ್ಮೆ ಜರುಗುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ವೈಭವದ ರಥೋತ್ಸವ ಬುಧವಾರ ಆರಂಭವಾಗಿದೆ.

ಮಾರಿಕಾಂಬಾ ದೇವಾಲಯದ ಎದುರಿನಿಂದ 9.15ಕ್ಕೆ ಆರಂಭ ಕಂಡ ಮೆರವಣಿಗೆಯಲ್ಲಿ ಅಸಂಖ್ಯ ಭಕ್ತರು ಪಾಲ್ಗೊಂಡಿದ್ದಾರೆ. ಮೆರವಣಿಗೆಯುದ್ದಕ್ಕೂ ಭಕ್ತರು ಉಧೋ ಉಧೋ ಮಾರಮ್ಮ, ಜೈ ಮಾರಿಕಾಂಬೆ ಘೋಷಣೆ ಕೂಗಿದರು. ಹತ್ತಾರು ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನ ನೀಡಿದವು. ರಥ ತೆರಳುವ ಮಾರ್ಗದುದ್ದಕ್ಕೂ ಭಕ್ತರು ಹೂವು ಹಾಕಿ ಸ್ವಾಗತಿಸಿದರು. ಇದೇ ವೇಳ ಬಾಳೆಹಣ್ಣು, ಕೋಳಿಗಳನ್ನು ರಥಕ್ಕೆ ಎಸೆದು ಭಕ್ತರು ಹರಕೆ ತೀರಿಸಿದರು. ಭಾವಪರವಶಗೊಂಡ ಭಕ್ತರು ಮೈಮೇಲೆ ಕುಂಕುಮ, ಭಂಡಾರ, ಅಡಿಕೆ ಸಿಂಗಾರ ಸುರಿದುಕೊಂಡು ದೇವಿಯನ್ನು ಆರಾಧಿಸಿದರು. ಮಧ್ಯಾಹ್ನ 1 ಗಂಟೆಯೊಳಗೆ ಜಾತ್ರಾ ಗದ್ದುಗೆಯಲ್ಲಿ ದೇವಿ ಮೂರ್ತಿಯ ಪ್ರತಿಷ್ಠಾಪನೆ ಆಗಲಿದೆ.

ADVERTISEMENT

ಮಾರಿಕಾಂಬಾ ಜಾತ್ರೆ ರಥೋತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.