ADVERTISEMENT

ಶಿರಸಿ| ಉತ್ತರ ಕನ್ನಡದಲ್ಲಿ ಭೂಕಂಪನದ ಅನುಭವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 11:18 IST
Last Updated 1 ಡಿಸೆಂಬರ್ 2024, 11:18 IST
<div class="paragraphs"><p>ಶಿರಸಿ ಅರಣ್ಯ</p></div>

ಶಿರಸಿ ಅರಣ್ಯ

   

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಭಾನುವಾರ ಬೆಳಿಗ್ಗೆ ಗುಡುಗಿನ ರೀತಿ ಶಬ್ದದ ನಂತರ ಜನತೆಗೆ ಭೂಕಂಪನದ ಅನುಭವವಾಗಿದೆ.

ಮದ್ಯಾಹ್ನ 11.42ರ ಆಸುಪಾಸು ಗುಡುಗಿದಂತ ಶಬ್ದ ಕೇಳಿಸಿ ಬಂದಿದ್ದು, ಸಾರ್ವಜನಿಕರಿಗೆ ಭೂಮಿ ಅಲುಗಾಡಿದ ಅನುಭವವಾಗಿದೆ. ಕೆಲವರು ಮೂರ್ನಾಲ್ಕು ಸೆಕೆಂಡ್ ಕಾಲ ತಮ್ಮ ಮನೆ ನಡುಗಿದ ಅನುಭವ ಹಂಚಿಕೊಂಡಿದ್ದಾರೆ.

ADVERTISEMENT

ಶಿರಸಿ ತಾಲ್ಲೂಕಿನ ಮತ್ತಿಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಯಲ್ಲಾಪುರ ತಾಲ್ಲೂಕಿನ ಚೌವತ್ತಿ, ಸಿದ್ದಾಪುರ ತಾಲ್ಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಕುಮಟಾ ಹಾಗೂ ಶಿರಸಿ ತಾಲ್ಲೂಕಿನ ಗಡಿ ಭಾಗವಾದ ದೇವಿಮನೆ ಘಟ್ಟ ಭಾಗಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಆಯಾ ಭಾಗದ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಭೂಮಿ ನಡುಗಿದ ಕುರಿತಂತೆ ವರ್ಲ್ಡ್ ಈಕ್ಯೂ ಲೊಕೇಟರ್ ಎಂಬ ವೆಬ್‌ಸೈಟ್ ನಲ್ಲಿಯೂ ಮಾಹಿತಿ ಲಭ್ಯವಾಗಿದ್ದು, ಹಿಂದೂ ಮಹಾಸಾಗರದ 10 ಕಿಲೋಮೀಟರ್ ಆಳದ ರಿಟ್ ಮಧ್ಯದಲ್ಲಿ ಅಲ್ಪ ಪ್ರಮಾಣದ ಭೂಕಂಪವಾಗಿದೆ. ಇದರ ಅನುಭವ ಉತ್ತರ ಕನ್ನಡ ಭಾಗದಲ್ಲಿಯೂ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಕ್ಟರ್ ಮಾಪನದಲ್ಲಿ 5 ರಷ್ಟು ಪ್ರಮಾಣದಲ್ಲಿ ಭೂಕಂಪ ಆಗಿದೆ ಎನ್ನುವ ಉಲ್ಲೇಖವಿದೆ.

ಡಿ.1ರ ಬೆಳಿಗ್ಗೆ 5 ಗಂಟೆ ವೇಳೆಗೂ ಇಂಥದ್ದೇ ರೀತಿಯ ಅನುಭವ ಆಗಿತ್ತು ಎಂದು ಮಂಜುಗುಣಿ ಭಾಗದ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಮೊದಲು ಭೂಮಿ ಕಂಪಿಸಿದ ಅನುಭವ ಆಯ್ತು, ನಂತರ ಮರು ಕಂಪನಗಳಾದವು, ಆ ನಂತರ ದೊಡ್ಡ ಗುಡುಗಿನ ಶಬ್ದ ಕೂಡ ಕೇಳಿಸಿತು ಎಂದು ಮಾಹಿತಿ ನೀಡಿದ್ದಾರೆ. ಆದರೆ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ಭೂಕಂಪನವಾದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.