
ಶಿರಸಿ (ಉತ್ತರ ಕನ್ನಡ ಜಿಲ್ಲೆ): ಅಪರೂಪ ಮತ್ತು ವಿನಾಶದ ಅಂಚಿನಲ್ಲಿರುವ ನೀರು ನಾಯಿ ಪಟ್ಟಣದ ಹೊಳೆಯಲ್ಲಿ ಪತ್ತೆಯಾಗಿದೆ.
‘ಪಟ್ಟಣದ ಹೊಳೆ ಉದ್ದಕ್ಕೂ ನಡೆಸಿದ ಅಧ್ಯಯನದ ವೇಳೆ ನೀರು ನಾಯಿ (ಸ್ಮೂಥ್ ಕೋಟೆಡ್ ಓಟರ್) ಗಮನಕ್ಕೆ ಬಂದಿದೆ’ ಎಂದು ಪರಿಸರ ಅಧ್ಯಯನಕಾರ ನರಸಿಂಹ ಹೆಗಡೆ ವಾನಳ್ಳಿ ತಿಳಿಸಿದ್ದಾರೆ.
‘ಹೊಳೆ ದಂಡೆ ಮತ್ತು ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ವಾಸಿಸುವ ಅಪರೂಪದ ಪ್ರಾಣಿ ಇದಾಗಿದೆ. ಸಂತತಿ ನಶಿಸುತ್ತಿರುವ ಪ್ರಭೇದಗಳ ಪಟ್ಟಿಯಲ್ಲಿ ಇದು ಸೇರಿದೆ’ ಎಂದು ತಿಳಿಸಿದ್ದಾರೆ.
‘ಮಂಜಗುಣಿ ಸಮೀಪದ ಕಣಿವೆ ಕಾನಿನಿಂದ ಗಣೇಶಪಾಲ್ಸ್‌ವರೆಗೆ ಹೊಳೆ ಸಮೀಪ ಇವುಗಳ ಸಂಖ್ಯೆ 200ರಿಂದ 250 ಇರಬಹುದು ಎಂದು ಸ್ಥಳೀಯರಾದ ಖರೇ ಒಕ್ಕಲು, ಮರಾಠಿ, ಕುಣಬಿ ಜನಾಂಗದವರು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಖಚಿತ ದಾಖಲೆ ಇಲ್ಲ. ಇನ್ನಷ್ಟು ಅಧ್ಯಯನ ನಡೆಸಬೇಕಿದೆ’ ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.