ಬಂಧನ
ಶಿರಸಿ: ವರದಕ್ಷಿಣೆ ವಿಚಾರವಾಗಿ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಯ ವಿಚಾರಣೆ ನಡೆಸಿದ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪಿ ಮೈಸೂರಿನ ಸರಸ್ವತಪುರಂನ ರಾಘವೇಂದ್ರ ಕೆ.ಎಸ್ ಎಂಬಾತನಿಗೆ 10 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹17 ಸಾವಿರ ದಂಡ ಮತ್ತು ಮೃತಳ ಕುಟುಂಬಕ್ಕೆ ₹25 ಸಾವಿರ ಪರಿಹಾರ ನೀಡುವಂತೆ ಶನಿವಾರ ತೀರ್ಪು ನೀಡಿದ್ದಾರೆ.
ಮೈಸೂರಿನ ತಾಂಡವಪುರದ ದಿವ್ಯಾ ಎಂಬುವವಳು ರೈಲ್ವೆ ಇಲಾಖೆಯ ಸಿಬ್ಬಂದಿ ರಾಘವೇಂದ್ರ ಕೆ.ಎಸ್. ಎಂಬಾತತನ್ನು ಮದುವೆಯಾಗಿದ್ದರು. ಗಂಡನಿಂದ ಮತ್ತು ಎರಡನೇ ಆರೋಪಿ ಶ್ರೀನಿವಾಸರಾವ್ ಹಾಗೂ ಮೂರನೇ ಆರೋಪಿ ಕೌಸಲ್ಯ ಅವರಿಂದ ವರದಕ್ಷಿಣೆ ಕಿರುಕುಳ ತಾಳಲಾರದೇ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಾವಿಗೆ ಆರೋಪಿ ಕಾರಣವಾದ ಬಗ್ಗೆ 2019ರಲ್ಲಿ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ರಾಜೇಶ ಎಂ.ಮಳಗಿಕರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.