ADVERTISEMENT

ಅಂಕೋಲಾ: ಕೆನರಾ ಬ್ಯಾಂಕ್ ಶಾಖೆಯಲ್ಲಿ ಆಕಸ್ಮಿಕ ಬೆಂಕಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 11:02 IST
Last Updated 13 ಜುಲೈ 2021, 11:02 IST
ಅಂಕೋಲಾದ ಸುಂದರ ನಾರಾಯಣ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಯು.ಪಿ.ಎಸ್ ಚಾರ್ಜರ್ ಸುಟ್ಟುಹೋಗಿದೆ
ಅಂಕೋಲಾದ ಸುಂದರ ನಾರಾಯಣ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಯು.ಪಿ.ಎಸ್ ಚಾರ್ಜರ್ ಸುಟ್ಟುಹೋಗಿದೆ   

ಅಂಕೋಲಾ: ಪಟ್ಟಣದ ಸುಂದರ ನಾರಾಯಣ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಯು.ಪಿ.ಎಸ್ ಕೊಠಡಿಯಲ್ಲಿ ಮಂಗಳವಾರ ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕ ಉಂಟುಮಾಡಿತು.

ಗಾಬರಿಗೊಂಡ ಬ್ಯಾಂಕ್ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡದವರು ಕೇವಲ 10 ನಿಮಿಷಗಳಲ್ಲಿ ಬೆಂಕಿ ಆರಿಸಿ ಸಂಭಾವ್ಯ ದೊಡ್ಡ ಅನಾಹುತವನ್ನು ತಪ್ಪಿಸಿದರು.

ರಸ್ತೆ ಮೇಲಿನ ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆ ಬಿದ್ದ ಪರಿಣಾಮ ವಿದ್ಯುತ್ ಸಂಚಾರದಲ್ಲಿ ಏರುಪೇರು ಉಂಟಾಗಿತ್ತು. ಈ ಕಾರಣದಿಂದ ಬೆಂಕಿ ತಗಲಿರಬಹುದು ಎನ್ನಲಾಗಿದೆ. ಕೊಠಡಿಯಲ್ಲಿದ್ದ ಯು.ಪಿ.ಎಸ್ ಚಾರ್ಜರ್ ಸುಟ್ಟುಹೋಗಿದ್ದು ಅಂದಾಜು ₹ 40 ಸಾವಿರ ಹಾನಿ ಸಂಭವಿಸಿದೆ. ಕೊಠಡಿಯಲ್ಲಿ ಯು.ಪಿ.ಎಸ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ.

ADVERTISEMENT

ಅಗ್ನಿಶಾಮಕ ದಳದ ಠಾಣಾಧಿಕಾರಿ ಉಮೇಶ ನಾಯ್ಕ, ಸಿಬ್ಬಂದಿ ಗಜಾನನ ನಾಯ್ಕ, ಗಣೇಶ ಶೇಟ್, ಗಣೇಶ ನಾಯ್ಕ, ಜೀವನ ಬಬ್ರುಕರ, ಅಮಿತ್ ನಾಯ್ಕ ಮತ್ತು ಬ್ಯಾಂಕ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.