ಯಲ್ಲಾಪುರ ತಾಲ್ಲೂಕು ಉಮ್ಮಚ್ಗಿಯಲ್ಲಿ ಪಶುವೈದ್ಯ ರಾಜೇಶ್ ಅವರು ಹಾವಿಗೆ ಚಿಕಿತ್ಸೆ ನೀಡಿದರು
Good luck taking care of a tired snake!
ಯಲ್ಲಾಪುರ: ತಾಲ್ಲೂಕಿನ ಭರತನಹಳ್ಳಿಯ ಉರಗ ರಕ್ಷಕ ಮಂಜು ಅವರು ಬಸವಳಿದು ಬಿದ್ದಿದ್ದ ನಾಗರ ಹಾವೊಂದಕ್ಕೆ ಚಿಕಿತ್ಸೆ ಕೊಡಿಸಿ ರಕ್ಷಿಸಿದ್ದಾರೆ.
ರೈತರೊಬ್ಬರ ಹೊಲದ ಬಳಿ ನಿತ್ರಾಣ ಸ್ಥಿತಿಯಲ್ಲಿದ್ದ ಹಾವನ್ನು ಅವರು ಮಂಗಳವಾರ ಉಮ್ಮಚ್ಗಿ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದರು. ಪಶುವೈದ್ಯ ರಾಜೇಶ್ ಅವರು ಹಾವಿಗೆ ಡ್ರಿಪ್ ನೀಡಿ ಉಪಚಾರ ಮಾಡಿದರು.
‘ಇದು ನಾಲ್ಕರಿಂದ ಐದು ವರ್ಷದ ಹೆಣ್ಣು ನಾಗರ ಹಾವು. ರೈತರು ಹೊಲಕ್ಕೆ ಔಷಧ ಸಿಂಪಡಣೆ ಮಾಡಿದಾಗ ಅಲ್ಲಿ ಸಿಕ್ಕ ಯಾವುದೋ ಆಹಾರವನ್ನು ತಿಂದು ಅಸ್ವಸ್ಥಗೊಂಡಿರಬಹುದು. ಇನ್ನೂ ಎರಡು ದಿವಸ ಔಷಧೋಪಚಾರ ಮಾಡಬೇಕಿದೆ’ ಎಂದು ಡಾ. ರಾಜೇಶ್ ತಿಳಿಸಿದ್ದಾರೆ.
ಹಾವು ಚೇತರಿಸಿಕೊಂಡ ಬಳಿಕ ಮತ್ತೆ ಕಾಡಿಗೆ ಬಿಡುವುದಾಗಿ ಮಂಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.