ADVERTISEMENT

ಮುಂಡಗೋಡ: ಉರಗ ರಕ್ಷಕ ಗಸ್ತು ವನಪಾಲಕ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:16 IST
Last Updated 5 ನವೆಂಬರ್ 2025, 5:16 IST
ಮುಂಡಗೋಡ ತಾಲ್ಲೂಕಿನ ಹಳ್ಳದಮನೆ ಬಳಿಯ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಹತ್ತು ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿದ ಗಸ್ತುವನಪಾಲಕ ಮುತ್ತುರಾಜ ಹಳ್ಳಿ
ಮುಂಡಗೋಡ ತಾಲ್ಲೂಕಿನ ಹಳ್ಳದಮನೆ ಬಳಿಯ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಹತ್ತು ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿದ ಗಸ್ತುವನಪಾಲಕ ಮುತ್ತುರಾಜ ಹಳ್ಳಿ   

ಮುಂಡಗೋಡ: ತಾಲ್ಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯ ಪಾಳಾ ಶಾಖೆಯ ಹುಡೇಲಕೊಪ್ಪ ಗಸ್ತಿನಲ್ಲಿ ವನಪಾಲಕರಾಗಿರುವ ಮುತ್ತುರಾಜ ಹಳ್ಳಿ ಅವರು ಸಾವಿರಕ್ಕೂ ಹೆಚ್ಚು ವಿವಿಧ ಪ್ರಬೇಧದ ಹಾವುಗಳನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಡುವ ಕೆಲಸ ಮಾಡಿದ್ದಾರೆ.

‘ಹಾವುಗಳನ್ನು ಸರಿಯಾದ ರೀತಿಯಲ್ಲಿ ಹಿಡಿದು, ಅವುಗಳಿಗೂ ಬದುಕಲು ಅವಕಾಶ ಕಲ್ಪಿಸಿದರೆ ಅದರಲ್ಲಿ ಸಿಗುವ ಸಂತಸ ಹೆಚ್ಚಿರುತ್ತದೆ. ಈವರೆಗೆ ಹೆಬ್ಬಾವು, ಕೊಳಕು ಮಂಡಲ, ಉರಿ ಮಂಡಲ, ನಾಗರಹಾವು, ಕಟ್ಟು ಹಾವು, ಬೆಕ್ಕಿನ ಕಣ್ಣಿನ ಹಾವು, ಆಭರಣದ ಹಾವು, ಕೆರೆ ಹಾವು, ನೀರು ಹಾವು, ಹಸಿರು ಹಾವು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದೇನೆ. ಹಾವಿಗೆ ಯಾವುದೇ ತೊಂದರೆ ಆಗದಂತೆ ಸಂರಕ್ಷಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಹಾವು ಕಂಡುಬಂದರೆ ಸಂಪರ್ಕಿಸಬಹುದು (ಮೊ.9740656919)’ ಎಂದು ಮುತ್ತುರಾಜ ಹಳ್ಳಿ ತಿಳಿಸಿದರು.

‘ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವಲ್ಲಿ ಮುತ್ತುರಾಜ ಹಳ್ಳಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾವುಗಳನ್ನು ಸಾಯಿಸುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ಹಾವುಗಳು ಮನೆಯಲ್ಲಿ ಕಂಡುಬಂದಲ್ಲಿ ಅವುಗಳಿಗೆ ತೊಂದರೆ ನೀಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಎಸಿಎಫ್ ರವಿ ಹುಲಕೋಟಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.