ADVERTISEMENT

ಸೋದೆಯಲ್ಲಿ ಯತಿದ್ವಯರ ಚಾತುರ್ಮಾಸ್ಯ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 12:29 IST
Last Updated 5 ಜುಲೈ 2020, 12:29 IST
ಶಿರಸಿ ತಾಲ್ಲೂಕಿನ ಸೋದೆ ವಾದಿರಾಜ ಮಠದಲ್ಲಿ ವಿಶ್ವವಲ್ಲಭ ತೀರ್ಥರು ಭೂತರಾಜರ ಪೂಜೆ ನೆರವೇರಿಸಿದರು. ರಘುವರೇಂದ್ರ ತೀರ್ಥ ಸ್ವಾಮೀಜಿ ಇದ್ದಾರೆ
ಶಿರಸಿ ತಾಲ್ಲೂಕಿನ ಸೋದೆ ವಾದಿರಾಜ ಮಠದಲ್ಲಿ ವಿಶ್ವವಲ್ಲಭ ತೀರ್ಥರು ಭೂತರಾಜರ ಪೂಜೆ ನೆರವೇರಿಸಿದರು. ರಘುವರೇಂದ್ರ ತೀರ್ಥ ಸ್ವಾಮೀಜಿ ಇದ್ದಾರೆ   

ಶಿರಸಿ: ಭಾನುವಾರ ಆಷಾಢ ಪೂರ್ಣಿಮೆಯಂದು ತಾಲ್ಲೂಕಿನ ಸೋದೆ ವಾದಿರಾಜ ಮಠಾಧೀಶ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹಾಗೂ ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥ ಸ್ವಾಮೀಜಿ ಅವರು ಸೋದೆ ವಾದಿರಾಜ ಮಠದಲ್ಲಿ ಚಾತುರ್ಮಾಸ್ಯ ಸಂಕಲ್ಪ ಮಾಡಿದರು.

ವಾದಿರಾಜ ಮಠದ ಶ್ರೀಭೂವರಾಹ, ಹಯಗ್ರೀವ, ವೇದವ್ಯಾಸ ದೇವರಿಗೆ ಹಾಗೂ ಶಿರೂರು ಮಠದ ರುಕ್ಮಿಣಿ ಸತ್ಯಭಾಮಾ ಸಹಿತ ವಿಠ್ಠಲ ದೇವರಿಗೆ ವಾರ್ಷಿಕ ಮಹಾಭಿಷೇಕವನ್ನು ವಿಶ್ವವಲ್ಲಭ ತೀರ್ಥರು ನೆರವೇರಿಸಿದರು. ವಿಶ್ವವಲ್ಲಭ ತೀರ್ಥರು 15ನೇ ಚಾತುರ್ಮಾಸ್ಯ ಸಂಕಲ್ಪವನ್ನು, ರಘುವರೇಂದ್ರ ತೀರ್ಥ ಶ್ರೀಗಳು 12ನೇ ಚಾತುರ್ಮಾಸ್ಯ ಸಂಕಲ್ಪವನ್ನು ಭಾವಿಸಮೀರ ವಾದಿರಾಜರ ಪಂಚವೃಂದಾವನದ ಸನ್ನಿಧಿಯಲ್ಲಿ ಪೂರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT