ಕುಮಟಾ: ‘ನಮಗೆ ಯಾರೂ ವಿರೋಧಿಗಳಿಲ್ಲ ಎನ್ನುವ ನಿರ್ಮಲ ಭಾವ ನಮ್ಮಲ್ಲಿ ಬೆಳೆದರೆ ಮನಸ್ಸು ಸದಾ ಒಳಿತು ಬಯಸುತ್ತದೆ. ಆದರೆ ನಾವು ಅನುಮಾನ, ಅವಿಶ್ವಾಸವನ್ನು ತುಂಬಿಕೊಂಡು ಅನಾರೋಗ್ಯ ತಂದುಕೊಳ್ಳುತ್ತೇವೆ’ ಎಂದು ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲ್ಲೂಕು ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪದಲ್ಲಿ ಗುರುವಾರ ಆರಂಭವಾದ ಚಾತುರ್ಮಾಸ್ಯ ವ್ರತ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ನಮ್ಮ ಅನೇಕ ಪದರಗಳ ಆಳದಲ್ಲಿ ಧರ್ಮ ಅಡಗಿದೆ. ಅದನ್ನು ಕೋನಳ್ಳಿಯಲ್ಲಿ ಸಾಮಾಜಿಕ ಕಾರ್ಯಕರ್ತ ಎಚ್.ಆರ್. ನಾಯ್ಕ ಅವರು ಅದನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮ ಜಾಗೃತಿಯಾದರೆ ಅಧ್ಯಾತ್ಮವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸುಲಭವಾಗಿ ಲಭಿಸುತ್ತದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ, ‘ಧಾರ್ಮಿಕ ಶ್ರದ್ಧೆ, ನಂಬಿಕೆ ಎಲ್ಲ ಕಾಲಕ್ಕೂ ಬೇಕಾಗುವ ಸಂಗತಿ. ಕೋನಳ್ಳಿಯಲ್ಲಿ ನಡೆಯುತ್ತಿರುವ ಚಾತುರ್ಮಸ್ಯ ವ್ರತ ಕಾರ್ಯಕ್ಕೆ ಎಲ್ಲ ಸೌಲಭ್ಯ ಒದಗಿಸಲು ಸಿದ್ಧ’ ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ, ಕಾರ್ಯಕ್ರಮದ ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಆರ್. ನಾಯ್ಕ, ಮುಖಂಡರಾದ ಮಂಜುನಾಥ ಎಲ್. ನಾಯ್ಕ, ರತ್ನಾಕರ ನಾಯ್ಕ, ವಾಮನ ನಾಯ್ಕ, ಗಜು ನಾಯ್ಕ, ಎಂ.ಟಿ. ಗೌಡ, ಸಚಿನ್ ನಾಯ್ಕ, ಪ್ರಮೋದ ನಾಯ್ಕ, ಪಿ.ಆರ್. ನಾಯ್ಕ, ಕೆ.ಎಚ್. ಗೌಡ, ವೇದಮೂರ್ತಿ ಲೋಕೇಶ್, ಆಟೋ ಗಂಗಾಧರ, ನವೀನ್ ಪ್ರಕಾಶ ಬೆಳ್ತಂಗಡಿ, ಜಿ.ಎಸ್. ನಾಯ್ಕ, ಆರ್.ಜಿ.ನಾಯ್ಕ, ಮಂಜುನಾಥ ನಾಯ್ಕ, ಉದಯ ನಾಯ್ಕ, ವಿ.ಐ. ಹೆಗಡೆ, ಅರುಣ ಉಭಯಕರ್, ಛಾಯಾ ಉಭಯಕರ್, ನಾಗೇಶನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.