ADVERTISEMENT

ಶ್ರೀಧರ ಶೇಷ ಅಡಿಗೆ ‘ಭಾರತಾತ್ಮ’ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 12:44 IST
Last Updated 16 ಅಕ್ಟೋಬರ್ 2018, 12:44 IST
ಶ್ರೀಧರ ಶೇಷ ಅಡಿ
ಶ್ರೀಧರ ಶೇಷ ಅಡಿ   

ಕಾರವಾರ:ಗೋಕರ್ಣದ ಸಂಸ್ಕೃತ ವಿದ್ವಾನ್ ಶ್ರೀಧರ ಶೇಷ ಅಡಿ ಅವರಿಗೆ ವಾರಾಣಸಿಯ ಸಿಂಘಾಲ್ ಫೌಂಡೇಷನ್‌ನ ಪ್ರತಿಷ್ಠಿತ ‘ಭಾರತಾತ್ಮ’ ಪುರಸ್ಕಾರವನ್ನು ಈಚೆಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹ 5 ಲಕ್ಷ ನಗದು, ಪಾರಿತೋಷಕ, ಬೆಳ್ಳಿಯ ಫಲಕಗಳನ್ನು ಒಳಗೊಂಡಿದೆ. ವಾರಾಣಸಿಯಲ್ಲಿ ನಡೆದ ಸಮಾರಂಭದಲ್ಲಿ ಯೋಗಗುರು ಬಾಬಾ ರಾಮ್‌ದೇವ್ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅಖಿಲ ಭಾರತ ಸಂತ ಮಹಾಸಭಾದ ಅಧ್ಯಕ್ಷ ಗೋವಿಂದ ದೇವಗಿರಿ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೋಕರ್ಣದಲ್ಲಿ ಋಗ್ವೇದ ಅಧ್ಯಯನ ಮಾಡಿದ ಶ್ರೀಧರ ಅವರು,1970ರ ಸುಮಾರಿಗೆವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಥರ್ವ ವೇದವನ್ನು ಅಭ್ಯಾಸಮಾಡಿದರು. ಅಲ್ಲಿ ಶಿಕ್ಷಾಶಾಸ್ತ್ರದಲ್ಲಿ ಆಚಾರ್ಯ ಪದವಿ ಪಡೆದರು. ಗೋಕರ್ಣದ ದಕ್ಷಿಣಾಮೂರ್ತಿ ವೇದಭವನ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು 2006ರಲ್ಲಿ ನಿವೃತ್ತರಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.