ADVERTISEMENT

ಮಣ್ಣಿನ ಮಕ್ಕಳಿಗೆ ಉನ್ನತ ಖಾತೆಯೇ ಬೇಕು: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 9:04 IST
Last Updated 6 ಸೆಪ್ಟೆಂಬರ್ 2021, 9:04 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ಶಿರಸಿ: ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಕೇಳುವದೆ ಉನ್ನತ ಖಾತೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಕೆಡಿಸಿಸಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುವ ವೇಳೆ ಹಾಸ್ಯ ಚಟಾಕಿ ಹಾರಿಸಿದ ಅವರು, 'ಜನರ ಎದುರು ನಾವು ಮಣ್ಣಿನ ಮಕ್ಕಳು ಎನ್ನುತ್ತಾರೆ. ಮುಖ್ಯಮಂತ್ರಿ ಎದುರು ಪಿಡಬ್ಲ್ಯೂಡಿ, ನೀರಾವರಿ, ಗೃಹ ಖಾತೆಯ ಬೇಡಿಕೆ ಇಡುತ್ತಾರೆ' ಎಂದರು.

'ಸಹಕಾರ, ಕಾರ್ಮಿಕ, ಕೃಷಿ ಖಾತೆ ಯಾರೂ ಬೇಡಿಕೆ ಇಡುವುದಿಲ್ಲ.‌ ನಾವೆಲ್ಲ ಬೇಡದ ಖಾತೆಯನ್ನು ಪಡೆದು ಒಳ್ಳೆಯ ಕೆಲಸಮಾಡುತ್ತಿದ್ದೇವೆ' ಎಂದರು.

'ಸಚಿವ ಸ್ಥಾನ ನೀಡದ್ದಕ್ಕೆ ಬೇಸರಗೊಂಡಿದ್ದ ಶಿವರಾಮ ಹೆಬ್ಬಾರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಸಹಕಾರ ಕೋರಿದ್ದರು.
ನಾನು ಭೈರತಿ ಸೇರಿ ಎಲ್ಲರೂ ಅವರಿಗೆ ಕೈಜೋಡಿಸಿದೆವು' ಎಂದು ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಸಮ್ಮುಖದಲ್ಲೇ ಹೇಳಿದರು.

ವೇದಿಕೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.