ADVERTISEMENT

ವಿದ್ಯಾರ್ಥಿಗಳಿಗೆ ಸಾಧಿಸುವ ಉತ್ಸಾಹವಿರಲಿ: ವಿನಯ ಗಾಂವಕರ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:49 IST
Last Updated 10 ಫೆಬ್ರುವರಿ 2026, 7:49 IST
ಅಂಕೋಲಾದ ಪಿ.ಎಂ.ಪದವಿಪೂರ್ವ ಕಾಲೇಜಿನ 32ನೇ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ವಿನಯ ಗಾಂವಕರ್ ಮಾತನಾಡಿದರು
ಅಂಕೋಲಾದ ಪಿ.ಎಂ.ಪದವಿಪೂರ್ವ ಕಾಲೇಜಿನ 32ನೇ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ವಿನಯ ಗಾಂವಕರ್ ಮಾತನಾಡಿದರು   

ಅಂಕೋಲಾ: ‘ವಿದ್ಯಾರ್ಥಿ ಜೀವನದಲ್ಲಿ ಗುರಿ ಸಾಧಿಸುವ ಉತ್ಸಾಹ ಇರಬೇಕು. ನಿಮ್ಮ ಪಾಲಕರ ಕಷ್ಟವನ್ನು ಅರಿಯಬೇಕು’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ವಿನಯ ಗಾಂವಕರ್ ಹೇಳಿದರು.

ಪಟ್ಟಣದ ಪಿ.ಎಂ.ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 32ನೇ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಶವ ನಾಯ್ಕ ಮಾತನಾಡಿ, ‘ಈ ಜಿಲ್ಲೆಗೆ ದಿನಕರ ದೇಸಾಯಿ ಅವರ ಕೊಡುಗೆ ದೊಡ್ಡದು, ಅವರು ಈ ಸಂಸ್ಥೆ ಕಟ್ಟದಿದ್ದರೆ ನಾವೆಲ್ಲರೂ ಅಕ್ಷರ ಕಲಿಯುವುದು ಅಸಾಧ್ಯವಾಗಿತ್ತು’ ಎಂದರು.

ADVERTISEMENT

ನಾಟಿ ವೈದ್ಯ ಹನುಮಂತ ಗೌಡ, ಶಿಕ್ಷಕಿ ವಿಶಾಲಾಕ್ಷಿ ಶೆಟ್ಟಿ ಮಾತನಾಡಿದರು. ಪ್ರಾಚಾರ್ಯ ರಮಾನಂದ ನಾಯಕ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ನಾಯ್ಕ, ಉಪನ್ಯಾಸಕ ಉಲ್ಲಾಸ ಹುದ್ದಾರ, ರಮೇಶ ಗೌಡ, ಶ್ರೀನಿವಾಸ ಯು.ಕೆ, ಜಿನಾಖಾನ್, ರೇಷ್ಮಾ ನಾಯ್ಕ, ಅರ್ಚನಾ ನಾಯ್ಕ, ವಿನಾಯಕ ನಾಯ್ಕ, ಗಣಪತಿ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.