ADVERTISEMENT

ತಾಮ್ರಪತ್ರದೊಂದಿಗೆ ಸುಗ್ಗಿ ಕುಣಿತ ಸಂಪನ್ನ

ರೂಪಕದಲ್ಲಿ ಮೂಡಿಬಂದ ದೈನಂದಿನ ಆಗುಹೋಗು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 15:15 IST
Last Updated 9 ಮಾರ್ಚ್ 2020, 15:15 IST
ಅಂಕೋಲಾದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯನ್ನು ಸೈನಿಕರು ರಕ್ಷಿಸುವ ಅಣಕು ಪ್ರದರ್ಶನ ಗಮನ ಸೆಳೆಯಿತು
ಅಂಕೋಲಾದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯನ್ನು ಸೈನಿಕರು ರಕ್ಷಿಸುವ ಅಣಕು ಪ್ರದರ್ಶನ ಗಮನ ಸೆಳೆಯಿತು   

ಅಂಕೋಲಾ: ತಾಲ್ಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಮತ್ತು ವಿವಿಧ ರೂಪಕಗಳ ಮೆರವಣಿಗೆಯು ಪಟ್ಟಣದಲ್ಲಿ ಸೋಮವಾರ ಗಮನ ಸೆಳೆಯಿತು.

ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಬಂದು ತಹಶೀಲ್ದಾರ್ ಮೇಘರಾಜ ನಾಯ್ಕ ಅವರಿಂದ ತಾಮ್ರಪತ್ರ ಪಡೆಯುವ ಮೂಲಕ ಸುಗ್ಗಿ ಕುಣಿತ ಸಂಪನ್ನಗೊಂಡಿತು.

ಬ್ರಿಟಿಷರ ಕಾಲದಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳ ಅಣುಕು ಪ್ರದರ್ಶನ ಮಾಡಲುನೃತ್ಯವನ್ನು ಬಳಸಿಕೊಳ್ಳಲಾಗುತ್ತಿತ್ತು.ಆ ಪದ್ಧತಿ ಈಗ ಸ್ವಲ್ಪ ರೂಪಾಂತರವಾಗಿದ್ದು, ಈಗಿನ ದೈನಂದಿನಆಗುಹೋಗುಗಳ ಅಣಕು ಪ್ರದರ್ಶನ ಮಾಡಲಾಗುತ್ತದೆ. ವಿವಿಧ ಬಗೆಯ ರೂಪಕಗಳನ್ನು ಬೆಳಂಬಾರ ಹಾಲಕ್ಕಿ ಸಮುದಾಯದವರು ಮಾಡುತ್ತಾರೆ.ಸುಗ್ಗಿ ತಂಡಕ್ಕೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ತಾಮ್ರಪತ್ರವನ್ನು ಊರಗೌಡರ ಸಮ್ಮುಖದಲ್ಲಿ ತೆರೆದು ತಹಶೀಲ್ದಾರ್ಗೌರವ ಸೂಚಿಸಿದರು.

ADVERTISEMENT

ವಿಶೇಷ ಆಕರ್ಷಣೆ

ನೆರೆಯಲ್ಲಿ ಸಿಲುಕಿದ್ದ ವೃದ್ಧೆಯನ್ನು ರಕ್ಷಿಸಿದ ಸೈನಿಕರ ತಂಡ, ಪ್ರವಾಹದಿಂದ ಮನೆ ಕಳೆದುಕೊಂಡು ಬೀದಿಗೆ ಬಂದ ಸಂತ್ರಸ್ತರು, ಅಮರ ಪ್ರೇಮಿ, ರಾಮ ಸೇತುವೆ ನಿರ್ಮಾಣಕ್ಕೆ ಕಲ್ಲುಗಳನ್ನು ಹೊತ್ತು ತಂದ ವಾನರ ಸೈನ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅಣಕು,ಕೋವಿಡ್ 19 ವೈರಸ್ ತಡಗಟ್ಟಲುಬಂದ ವೈದ್ಯರ ತಂಡ, ವಿಶೇಷವಾದ ‘ಅವತಾರ್ ಕಿಂಗ್ ಬರ್ಡ್‌’, ಭಾರತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಭರ್ಜರಿ ಸ್ವಾಗತ ಮುಂತಾದ ಅನೇಕ ಪಾತ್ರಗಳು, ರೂಪಕಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.