ADVERTISEMENT

ಕಾರವಾರ: 15 ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:31 IST
Last Updated 4 ಸೆಪ್ಟೆಂಬರ್ 2024, 13:31 IST
   

ಕಾರವಾರ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣನಿಧಿಯ ವತಿಯಿಂದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ 15 ಮಂದಿ ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಕಾರವಾರ ಹಬ್ಬುವಾಡಾ ಶಾಲೆಯ ಶೈಲಾ ಸದಾನಂದ ಆಚಾರಿ, ಅಂಕೋಲಾ ಬೆಳಸೆಯ ರೇಣುಕಾ ಹೊನ್ನಪ್ಪ ನಾಯಕ, ಕುಮಟಾದ ಕೆಳಗಿನ ನಂದೊಳ್ಳಿಯ ವಿದ್ಯಾಧರ ವೆಂಕಟ್ರಮಣ ಅಡಿ, ಹೊನ್ನಾವರ ಖರ್ವಾದ ಶಾರದಾ ನಾಯ್ಕ, ಭಟ್ಕಳ ನರೇಕುಳಿಯ ರಾಮಚಂದ್ರ ದೇವಣ್ಣ ನಾಯಕ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸದಾಶಿವಗಡದ ವೀಣಾ ಆನಂದು ಗುನಗಿ (ಕಾರವಾರ), ಬೆಲೆಕೇರಿಯ ಚಂದ್ರಕಲಾ ಗಣಪತಿ ನಾಯಕ (ಅಂಕೋಲಾ), ಹೊಲನಗದ್ದೆಯ ಮಂಗಲಾ ಕೃಷ್ಣಪ್ಪ ನಾಯ್ಕ (ಕುಮಟಾ), ಮಂಕಿಮಡಿಯ ಉದಯ ರಾಮಚಂದ್ರ ನಾಯ್ಕ (ಹೊನ್ನಾವರ), ಗಾಂಧಿನಗರದ ಹೇಮಾವತಿ ಎಸ್.ನಾಯ್ಕ (ಭಟ್ಕಳ) ಆಯ್ಕೆ ಮಾಡಲಾಗಿದೆ.

ADVERTISEMENT

ಪ್ರೌಢಶಾಲೆ ವಿಭಾಗದಲ್ಲಿ ಕಾರವಾರದ ತೊಡೂರಿನ ಸರ್ಕಾರಿ ಪ್ರೌಢಶಾಲೆಯ ಸ್ಮಿತಾ ಆತ್ಮಾರಾಮ ನಾಯ್ಕ, ಅಂಕೋಲಾ ಬೆಲೆಕೇರಿಯ ಎಸ್.ನಾಗರಾಜ, ಕುಮಟಾ ಹೆಗಡೆಯ ಶಾಂತಿಕಾಂಬಾ ಪ್ರೌಢಶಾಲೆಯ ಮಡಿವಾಳಪ್ಪ ಶಿವಪ್ಪ ದೊಡಮನಿ, ಹೊನ್ನಾವರ ಕರ್ಕಿಯ ಚನ್ನಕೇಶವ ಪ್ರೌಢಶಾಲೆಯ ಲಂಬೋದರ ಮಂಜುನಾಥ ಹೆಗಡೆ, ಭಟ್ಕಳ ಕುಂಟವಾಣಿಯ ಸುರೇಶ ಎಂ.ತಾಂಡೇಲ ಆಯ್ಕೆಯಾಗಿದ್ದಾರೆ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಲತಾ ನಾಯಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.