ADVERTISEMENT

ಶಿರಸಿ | ದರೋಡೆ: ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:08 IST
Last Updated 8 ಆಗಸ್ಟ್ 2024, 16:08 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಶಿರಸಿ: ಕೇರಳದ ಮೂಲದ ಇಬ್ಬರಿಗೆ ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ಐವರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯ ನಾಗಪ್ಪ ದೊಡ್ಡರಾಮಣ ಕೊರಚರ, ಅವಿನಾಶ ಕೊಟ್ರೇಶ ಕೊರಚರ, ನಿಸ್ಸಾರ್ ಅಹ್ಮದ್ ಮಹಮ್ಮದ್ ಜಾಫರ್ ಬಳಗಾರ, ಸಂಜೀವ ಕೆ.ಆರ್. ರಾಮಣ್ಣ ಕೊರಚರ ಹಾಗೂ ಶಿಕಾರಿಪುರ ಮಲೇನಹಳ್ಳಿ ತಾಂಡಾದ ಕೃಷ್ಣಪ್ಪ ನಾಯ್ಕ ಅವರನ್ನು ಬಂಧಿಸಲಾಗಿದ್ದು, ಇವರಿಂದ ₹7,63,000 ಹಣ ಹಾಗೂ 3 ಮೋಟಾರ್ ಸೈಕಲ್ ವಾಹನವನ್ನು ಜಪ್ತು ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಗುರುವಾರ ಶಿರಸಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.‌

ADVERTISEMENT

ಪ್ರಕರಣದಲ್ಲಿ ತಲೆಮರೆಸಿಕೊಂಡ  ಮೂವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ದರೋಡೆ ನಡೆದ 24 ಗಂಟೆಯಲ್ಲಿ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದರು.

ಬಂಧಿತ ಆರೋಪಿಗಳ ಮೇಲೆ ಹಲವಾರು ಠಾಣೆಗಳಲ್ಲಿ ದೂರುಗಳಿವೆ. ಅದನ್ನೂ ತನಿಖೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.