ADVERTISEMENT

ಶಿರಸಿ | ಬೆದರಿಸಿ ಹಣ ಸುಲಿಗೆ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 16:33 IST
Last Updated 4 ಫೆಬ್ರುವರಿ 2022, 16:33 IST

ಶಿರಸಿ: ಇಲ್ಲಿನ ಗಣೇಶ ನಗರದ ವ್ಯಕ್ತಿಯೊಬ್ಬರಿಗೆ ಖಾಯಂ ಉಪನ್ಯಾಸಕರ ಹುದ್ದೆ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು, ಅವರನ್ನು ಒತ್ತೆಯಾಗಿಟ್ಟುಕೊಂಡಿದ್ದಲ್ಲದೆ ನಗ್ನಚಿತ್ರಗಳನ್ನು ಚಿತ್ರಿಸಿ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದಡಿ ಹೊಸಮಾರುಕಟ್ಟೆ ಠಾಣೆ ಪೊಲೀಸರು ಮೂವರನ್ನು ಗುರುವಾರ ಬಂಧಿಸಿದ್ದಾರೆ.

ಉಂಚಳ್ಳಿ ಸಮೀಪದ ಕೆರೆಜಡ್ಡಿಯ ಅಜಿತ್ ಶ್ರೀಕಾಂತ ನಾಡಿಗ (25), ಗೋಲಗೇರಿ ಓಣಿಯ ಧನುಷ್ಯ ಕುಮಾರ ದಿಲೀಪಕುಮಾರ ಶೆಟ್ಟಿ (25) ಮತ್ತು ಶಿವಮೊಗ್ಗದ ರಂಗನಾಥ ಬಡಾವಣೆಯ ಪದ್ಮಜಾ ಡಿ.ಎನ್. (50) ಬಂಧಿತ ಆರೋಪಿಗಳು.

ಆರೋಪಿಗಳು ದೂರುದಾರ ವ್ಯಕ್ತಿಯನ್ನು ನಂಬಿಸಿ ಶಿವಮೊಗ್ಗಕ್ಕೆ ಕರೆದೊಯ್ದು ಅಲ್ಲಿ ಬಂಧಿಸಿಟ್ಟಿದ್ದರು. ದೂರುದಾರನ ತಂದೆಗೆ ಮಗನನ್ನು ಸುರಕ್ಷಿತವಾಗಿ ಕರೆತರಲು ಮತ್ತು ಚಿತ್ರಗಳನ್ನು ಅಳಿಸಿಹಾಕಲು ₹15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಖಾಲಿ ಚೆಕ್ ಕೂಡ ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಸ್ಪಿ ಸುಮನ್ ಪೆನ್ನೇಕರ್ ಮಾರ್ಗದರ್ಶನದಲ್ಲಿ ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ಎಸ್ಐ ಭಿಮಾಶಂಕರ ಸಿನ್ನೂರು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.