ADVERTISEMENT

ಕಾರವಾರ: ಬಲೆಗೆ ಬಿದ್ದ 19 ಕೆ.ಜಿ ತೂಕದ ಮೀನು

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 13:35 IST
Last Updated 19 ಜುಲೈ 2021, 13:35 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸೋಮವಾರ ಏಂಡಿ ಬಲೆಗೆ ಬಿದ್ದ 19 ಕೆ.ಜಿ. ತೂಕದ ಕುರಡೆ ಮೀನನ್ನು ಮೀನುಗಾರ ಎತ್ತಿ ಹಿಡಿದು ಸಂಭ್ರಮಿಸಿದರು
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸೋಮವಾರ ಏಂಡಿ ಬಲೆಗೆ ಬಿದ್ದ 19 ಕೆ.ಜಿ. ತೂಕದ ಕುರಡೆ ಮೀನನ್ನು ಮೀನುಗಾರ ಎತ್ತಿ ಹಿಡಿದು ಸಂಭ್ರಮಿಸಿದರು   

ಕಾರವಾರ: ನಗರದಲ್ಲಿ ಸೋಮವಾರ ಸಾಂಪ್ರದಾಯಿಕ ಪದ್ಧತಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನಗಾರರ ಬಲೆಗಳಿಗೆ ಭರ್ಜರಿಯಾಗಿ ಮೀನುಗಳು ಬಿದ್ದವು.

ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಏಂಡಿ ಬಲೆಗೆ 19 ಕೆ.ಜಿ ತೂಕದ ಕುರಡೆ ಮೀನು ಸಿಲುಕಿದೆ. ಅದು ಒಟ್ಟು ₹ 8 ಸಾವಿರಕ್ಕೆ ಮಾರಾಟವಾಯಿತು. ಅಲ್ಲೇ ಸಮೀಪದಲ್ಲಿ ಮತ್ತೊಂದು ಬಲೆಗೆ ರಾಶಿ ರಾಶಿ ಸಿಗಡಿ ಮೀನುಗಳು ಬಿದ್ದಿವೆ. ಮೀನುಗಾರರ ಕುಟುಂಬದ ಮಹಿಳೆಯರು ಅವುಗಳನ್ನು ಕಡಲತೀರದಲ್ಲಿ ಹರವಿಟ್ಟು ಸ್ವಚ್ಛಗೊಳಿಸಿ ವ್ಯಾಪಾರಕ್ಕೆ ಅಣಿಗೊಳಿಸಿದರು.

ತಾಲ್ಲೂಕಿನಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಆಳೆತ್ತರದ ಅಲೆಗಳು ಏಳುತ್ತಿವೆ. ಇದರಿಂದ ಮೀನುಗಾರಿಕೆ ಸಾಧ್ಯವಾಗದೇ ಮೀನುಗಾರರು ಬೇಸರದಲ್ಲಿದ್ದರು. ಸೋಮವಾರ ಮಳೆ ಸ್ವಲ್ಪ ವಿರಾಮ ನೀಡಿದ್ದ ವೇಳೆಯಲ್ಲೇ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿ ಸಂಭ್ರಮಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.