
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
ಕಾರವಾರ: ಅಳ್ನಾವರ– ಅಂಬೇವಾಡಿ ರೈಲ್ವೆ ಮಾರ್ಗದ ಗೇಟ್ ಮುಚ್ಚುವ ಕಾಮಗಾರಿಯ ಹಿನ್ನೆಲೆಯಲ್ಲಿ ಹಳಿಯಾಳ ಕಾರ್ಕ ಕ್ರಾಸ್‌ನಿಂದ ದಾಂಡೇಲಿಯ ಭರ್ಚಿ ಕ್ರಾಸ್‍ವರೆಗಿನ ರಸ್ತೆಯಲ್ಲಿ ಜ.1ರಿಂದ ಮಾರ್ಚ್ 31ರವರೆಗೆ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.
‘ಹಳಿಯಾಳದಿಂದ ರಾಮನಗರ ಕಡೆಗೆ ಹೋಗುವ ವಾಹನಗಳು, ಹಳಿಯಾಳದಿಂದ ದಾಂಡೇಲಿ ಕಿತ್ತೂರು ಚೆನ್ನಮ್ಮ ಸರ್ಕಲ್ ಮುಖಾಂತರ ಭರ್ಚಿ ಮಾರ್ಗವಾಗಿ ಹಾಗೂ ರಾಮನಗರದಿಂದ ಹಳಿಯಾಳ ಕಡೆಗೆ ಹೋಗುವ ವಾಹನಗಳಿಗೆ ರಾಮನಗರದಿಂದ ಭರ್ಚಿ ಕ್ರಾಸ್ ಮಾರ್ಗವಾಗಿ ದಾಂಡೇಲಿ ಕಿತ್ತೂರು ಚೆನ್ನಮ್ಮ ಸರ್ಕಲ್ ನಿಂದ ಹಳಿಯಾಳಕ್ಕೆ ಸಂಚರಿಸಬಹುದು’ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.