ADVERTISEMENT

ಕೊಂಕಣ ರೈಲ್ವೆ ಮಾರ್ಗದಲ್ಲಿ ವಿದ್ಯುದೀಕರಣ, ರೈಲುಗಳ ಸಂಚಾರದಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 14:11 IST
Last Updated 14 ಸೆಪ್ಟೆಂಬರ್ 2018, 14:11 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕಾರವಾರ:ಕೊಂಕಣ ರೈಲ್ವೇಯ ಕಾರವಾರ ಮತ್ತು ತೋಕೂರು ಮಾರ್ಗದ ವಿದ್ಯುದೀಕರಣ ಮಾಡಲಾಗುತ್ತಿದೆ. ಇದರ ಪ್ರಮುಖ ಕಾಮಗಾರಿಯೊಂದನ್ನು ಸೆ.15ರಂದು ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಅಂದುಮಂಗಳೂರು ಸೆಂಟ್ರಲ್– ಮಡಗಾಂವ್– ಮಂಗಳೂರು ಸೆಂಟ್ರಲ್ ಇಂಟರ್‌ ಸಿಟಿ(ರೈಲು ಸಂಖ್ಯೆ:22636 / 22635) ರೈಲು ಸಂಚಾರ ರದ್ದು ಮಾಡಲಾಗಿದೆ.

ಮಂಗಳೂರು ಸೆಂಟ್ರಲ್– ಕುರ್ಲಾ ಟರ್ಮಿನಸ್ ನಡುವಿನ ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ (ರೈಲು ಸಂಖ್ಯೆ: 12620)ಎರಡು ಮುಕ್ಕಾಲುಗಂಟೆ ವಿಳಂಬವಾಗಿ ಸಂಚರಿಸಲಿದೆ.

ಉಳಿದಂತೆ, ಮಡಗಾಂವ್– ಮಂಗಳೂರು ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ: 56641) ಅಂಕೋಲಾ ರೈಲು ನಿಲ್ದಾಣದಲ್ಲಿ ಒಂದು ಗಂಟೆ ನಿಂತು ಮುಂದೆ ಸಾಗಲಿದೆ. ಎರ್ನಾಕುಲಂ– ನಿಜಾಮುದ್ದೀನ್ ನಡುವೆ ಸಂಚರಿಸುವ ‘ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್’ (ರೈಲು ಸಂಖ್ಯೆ:12617) ತೋಕೂರಿನಲ್ಲಿ 20ನಿಮಿಷ ನಿಲ್ಲಲಿದೆ.

ADVERTISEMENT

ನಿಜಾಮುದ್ದೀನ್– ತಿರುವನಂತಪುರಂ ನಡುವಿನ ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ22634)ಕುಂದಾಪುರ ರೈಲು ನಿಲ್ದಾಣದಲ್ಲಿ 45 ನಿಮಿಷ ನಿಲ್ಲಲಿದೆ. ಜಬಲ್ಪುರ– ಕೊಯಮತ್ತೂರು ನಡುವಿನ ವಿಶೇಷ ರೈಲು (ರೈಲು ಸಂಖ್ಯೆ:02198) ಅಂಕೋಲಾ ರೈಲು ನಿಲ್ದಾಣದಲ್ಲಿ 70 ನಿಮಿಷ ಇರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.