ಕಾರವಾರ: ಇಲ್ಲಿನ ಪಿಕಳೆ ರಸ್ತೆಯಲ್ಲಿ ದೊಡ್ಡ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದಿದ್ದು, ಅದರಲ್ಲಿದ್ದ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ.
ಪಿಕಳೆ ನರ್ಸಿಂಗ್ ಹೋಮ್ ಆವರಣದಲ್ಲಿನ ಮರವು ಬುಡಸಮೇತ ಬಿದ್ದಿದ್ದು ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ತಾಲ್ಲೂಕಿನ ಕುರ್ನಿಪೇಟ್ ಗ್ರಾಮದ ಲಕ್ಷ್ಮಿ ಪಾಗಿ (56) ಅವರಿಗೆ ಗಂಭೀರ ಗಾಯಗಳಾಗಿವೆ. ಮರದಡಿಗೆ ಸಿಲುಕಿದ್ದ ಕಾರಿನಿಂದ ಅವರನ್ನು ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ರಕ್ಷಣೆ ಮಾಡಿದರು.
8 ತಿಂಗಳ ಗರ್ಭಿಣಿ ಸೊಸೆಯನ್ನು ಆಸ್ಪತ್ರೆಗೆ ಲಕ್ಷ್ಮಿ ಕರೆತಂದಿದ್ದರು. ಮರ ಬೀಳುತ್ತಿದ್ದಂತೆ ಅವರ ಸೊಸೆ ಸುನೀತಾ ಪಾರಾಗಿದ್ದಾರೆ. ಕಾರಿನಿಂದ ಇಳಿಯಲಾಗದ ಲಕ್ಷ್ಮಿ ಅವರು ಅಪಾಯಕ್ಕೆ ತುತ್ತಾದರು ಎಂದು ಪ್ರತ್ಯಕ್ಷದರ್ಶಿ, ಆಸ್ಪತ್ರೆ ಸಿಬ್ಬಂದಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.