ADVERTISEMENT

ಎಚ್‌ಎಸ್‌ವಿ ಭಾವನೆಗೆ ಸ್ಪಂದಿಸಿದ ಕವಿ: ಪ್ರಮೋದ ಹೆಗಡೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 13:21 IST
Last Updated 8 ಜೂನ್ 2025, 13:21 IST
 ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಯಲ್ಲಾಪುರದಲ್ಲಿ ಎಚ್‌.ಎಸ್‌.ವೆಂಕಟೇಶಮೂತಿ೯ ಅವರಿಗೆ ನುಡಿನಮನ ಸಲ್ಲಿಸಲಾಯಿತು
 ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಯಲ್ಲಾಪುರದಲ್ಲಿ ಎಚ್‌.ಎಸ್‌.ವೆಂಕಟೇಶಮೂತಿ೯ ಅವರಿಗೆ ನುಡಿನಮನ ಸಲ್ಲಿಸಲಾಯಿತು   

ಯಲ್ಲಾಪುರ: ʻಎಚ್‌.ಎಸ್‌.ವೆಂಕಟೇಶಮೂರ್ತಿಯವರು ಮಾನವನ ಭಾವನೆಗಳಿಗೆ ಸ್ಪಂದಿಸುವಂತೆ ಅಕ್ಷರಗಳನ್ನು ಜೋಡಿಸಿ ಭಾವಗೀತೆಗಳನ್ನು ರಚಿಸಿದ್ದಾರೆ. ಅವರ ಗೀತೆಗಳು ಸದಾ ಅಮರʼ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ‘ಎಚ್. ಎಸ್.ವೆಂಕಟೇಶಮೂರ್ತಿ ನುಡಿ ನಮನ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶಿವಲೀಲಾ ಹುಣಸಗಿ ಭಾವಗೀತೆಗಳನ್ನು ಹಾಡಿದರು.

ADVERTISEMENT

ನೇತ್ರ ತಜ್ಞೆ ಡಾ ಸೌಮ್ಯ ಭಟ್, ವಿಶ್ವದಶ೯ನ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಪ್ರಮುಖರಾದ ಸುಬ್ರಾಯ ಬಿದ್ರೇಮನೆ, ಸತೀಶ್ ಶೆಟ್ಟಿ, ರೂಪಾ ಶೆಟ್ಟಿ, ಯಮುನಾ, ನಾಗೇಶ್ ಯಲ್ಲಾಪುರಕರ, ಸುಧಾಕರ ನಾಯ್ಕ್, ಗಣಪತಿ ಕಂಚಿಪಾಲ್, ಸೀತಾ ಭಟ್, ತ್ರಿಷಾ, ಶಂಕರ ನಾಯಕ್, ಕೇಬಲ್ ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.