ಜೊಯಿಡಾ: ‘ತಾಲ್ಲೂಕಿನ ಜನರು ಸಾಂಪ್ರದಾಯಿಕವಾಗಿ ಗೆಡ್ಡೆ ಗೆಣಸುಗಳನ್ನು ಬೆಳೆದು ತಳಿಗಳನ್ನು ರಕ್ಷಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಸಾವಯವ ಪದ್ಧತಿಯಲ್ಲಿಬೆಳೆಯುತ್ತಿರುವ ಭತ್ತ ಮತ್ತು ಗೆಡ್ಡೆ ಗೆಣಸು ತಳಿಗಳ ಸಂರಕ್ಷಣೆ ಹೆಚ್ಚಾಗಬೇಕಿದೆ’ ಎಂದು ಗೋವಾ ಜೀವ ವೈವಿಧ್ಯ ಮಂಡಳಿ ಸದಸ್ಯ ರಾಜೇಂದ್ರ ಕೇರಕರ್ಅಭಿಪ್ರಾಯಪಟ್ಟರು.
ಇಲ್ಲಿ ಬುಧವಾರ ಕುಣಬಿ ಸಮಾಜ ಅಭಿವೃದ್ದಿ ಸಂಘ ಮತ್ತು ಗೆಡ್ಡೆ ಗೆಣಸು ಬೆಳೆಗಾರರ ಸಂಘಹಮ್ಮಿಕೊಂಡ‘ಗೆಡ್ಡೆ ಗೆಣಸು ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಎಸ್.ಎಚ್.ಚನ್ನವೀರ ಸ್ವಾಮಿ ಮಾತನಾಡಿ, ‘ಬುಡಗಟ್ಟು ಜನರು ಇಂತಹ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿಹೊಂದಬೇಕಾಗಿದೆ’ಎಂದು ಅಭಿಪ್ರಾಯಪಟ್ಟರು.
ಪರಿಸರ ತಜ್ಞ ಬಾಲಚಂದ್ರ ಹೆಗಡೆಸಾಯಿಮನೆ ಮಾತನಾಡಿದರು. ಕುಣಬಿ ಸಮಾಜದ ಅಧ್ಯಕ್ಷರೂ ಆಗಿರುವ ಕಾರ್ಯಕ್ರಮದ ಸಂಘಟಕ ಡಾ.ಜಯಾನಂದ ಡೇರೇಕರ್ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ, ತಾಲ್ಲೂಕಿನಲ್ಲಿ ಅತಿಹೆಚ್ಚು ಗೆಣಸುಗಳನ್ನು ಬೆಳೆಯುತ್ತಿರುವ ರಾಮನಗರದ ಮಹಾದೇವ ಯಶ್ವಂತ ಮಿರಾಶಿ ಹಾಗೂ ಮೇಳವನ್ನು ಸಂಘಟಿಸಲು ಪ್ರಮುಖ ಪಾತ್ರ ವಹಿಸುತ್ತಿರುವ ವಿಷ್ಣು ಡೇರೇಕರ್ ಅವರನ್ನು ಸನ್ಮಾನಿಸಲಾಯಿತು.
ಜೊಯಿಡಾ, ಶಿರಸಿ, ಯಲ್ಲಾಪುರ, ಹಳಿಯಾಳ ತಾಲ್ಲೂಕುಗಳ 125ಕ್ಕೂ ಹೆಚ್ಚು ರೈತರು, ಮಹಿಳೆಯರು ಈ ವರ್ಷದ ಮೇಳದಲ್ಲಿ ಪಾಲ್ಗೊಂಡರು.52 ವಿವಿಧ ಜಾತಿಗಳಗೆಡ್ಡೆ ಗೆಣಸುಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಖರೀದಿಗೆಂದು ಗೋವಾ, ಬೆಳಗಾವಿ, ಧಾರವಾಡ, ದಾಂಡೇಲಿ ಭಾಗದಿಂದಲೂ ಜನರು ಬಂದಿದ್ದರು. ಈ ಮೇಳದಲ್ಲಿ ಸುಮಾರು₹ 3 ಲಕ್ಷಕ್ಕೂ ಹೆಚ್ಚಿನವಹಿವಾಟು ನಡೆಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿಸದಸ್ಯ ರಮೇಶ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ನಾಯ್ಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ, ಬಾಗಲಕೋಟೆತೋಟಗಾರಿಕಾ ವಿಶ್ವವಿದ್ಯಾಲಯದ ಅಮರೇಶ, ಜೊಯಿಡಾ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ಬಾಬಾ ಸಾಹೇಬ್ ಹುಲ್ಲಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.