ADVERTISEMENT

ಅರಬ್ಬಿ ಸಮುದ್ರ ಪ್ರಕ್ಷುಬ್ಧ: ಬೋಟ್‍ಗಳಿಗೆ ಕಾರವಾರ ಆಸರೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 22:34 IST
Last Updated 23 ಆಗಸ್ಟ್ 2024, 22:34 IST
<div class="paragraphs"><p>ಕಾರವಾರ ಬೈತಕೋಲ ಮೀನುಗಾರಿಕೆ ಬಂದರು ಸಮೀಪ ಸಮುದ್ರದಲ್ಲಿ ಲಂಗರು ಹಾಕಿ ನಿಂತ ಮಲ್ಪೆ, ಕೇರಳ ರಾಜ್ಯದ ಮೀನುಗಾರಿಕಾ ಬೋಟ್‍ಗಳು.</p></div>

ಕಾರವಾರ ಬೈತಕೋಲ ಮೀನುಗಾರಿಕೆ ಬಂದರು ಸಮೀಪ ಸಮುದ್ರದಲ್ಲಿ ಲಂಗರು ಹಾಕಿ ನಿಂತ ಮಲ್ಪೆ, ಕೇರಳ ರಾಜ್ಯದ ಮೀನುಗಾರಿಕಾ ಬೋಟ್‍ಗಳು.

   

ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್

ADVERTISEMENT

ಕಾರವಾರ: ಯಾಂತ್ರೀಕೃತ ಮೀನುಗಾರಿಕೆ ಆರಂಭದ ಅವಧಿಯಲ್ಲೇ ಮೀನುಗಳ ಕೊರತೆ ಎದುರಿಸಿದ್ದ ಮೀನುಗಾರರಿಗೆ ಹವಾಮಾನ ವೈಪರೀತ್ಯ ಮತ್ತೆ ಏಟು ನೀಡಿದೆ.

ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಎರಡು ದಿನಗಳಿಂದ ಇಲ್ಲಿನ ಬೈತಕೋಲ ಮೀನುಗಾರಿಕೆ, ವಾಣಿಜ್ಯ ಬಂದರುಗಳ ಸಮೀಪ ನೂರಾರು ಮೀನುಗಾರಿಕೆ ಬೋಟುಗಳು ಲಂಗರು ಹಾಕಿವೆ.

ಸ್ಥಳೀಯ ಬೋಟ್‍ಗಳಲ್ಲದೆ ಮಂಗಳೂರು, ಮಲ್ಪೆ, ನೆರೆಯ ತಮಿಳುನಾಡು, ಕೇರಳದ ರಾಜ್ಯದ ಹತ್ತಾರು ಮೀನುಗಾರಿಕಾ ಬೋಟ್‍ಗಳೂ ನಿಂತಿವೆ. ಆಗಸ್ಟ್ 2ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಿದೆ. ಮೀನು ಸಿಗದ ಕಾರಣಕ್ಕೆ ಕೆಲ ದಿನ ಬೋಟ್‍ಗಳು ಮೀನುಗಾರಿಕೆಗೆ ಇಳಿದಿರಲಿಲ್ಲ.

‘ಆಳ ಸಮುದ್ರದ ಮೀನುಗಾರಿಕೆಗೆ ಬಂದ ವೇಳೆಯೇ ಸಮುದ್ರ ಪ್ರಕ್ಷುಬ್ಧ ಗೊಳ್ಳುವ ಮುನ್ಸೂಚನೆ ಸಿಕ್ಕಿತು. ಆಗಸ್ಟ್ ಆರಂಭದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಲಭಿಸುತ್ತಿಲ್ಲ’ ಎಂದು ಮಲ್ಪೆಯ ಪರ್ಸಿನ್ ಬೋಟ್‍ನಲ್ಲಿ ಕೆಲಸ ಮಾಡುವ ಭಟ್ಕಳದ ಮಂಜು ಮೊಗೇರ ತಿಳಿಸಿದರು.

‘ಇನ್ನೂ 3 ದಿನ ಸಮುದ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿ ಇರಲಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದರು.

‘ಪರ್ವತಗಳಿಂದ ಆವರಿಸಿರುವ ಕಾರಣ ಕಾರವಾರ ಬಂದರು ನೈಸರ್ಗಿಕವಾಗಿ ಸುರಕ್ಷಿತವಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಾಗಲೆ ಹೊರ ಜಿಲ್ಲೆ ಮತ್ತು ಹೊರರಾಜ್ಯದ ಬೋಟುಗಳು ಇಲ್ಲಿಗೆ ಬಂದರು ಲಂಗರು ಹಾಕುತ್ತವೆ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.