ADVERTISEMENT

ಕಾರವಾರ: ಸಮುದ್ರ ಸೇರಿದ 47 ಕಡಲಾಮೆ ಮರಿಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 13:58 IST
Last Updated 6 ಫೆಬ್ರುವರಿ 2024, 13:58 IST
<div class="paragraphs"><p>ಕಾರವಾರ ತಾಲ್ಲೂಕಿನ ದೇವಬಾಗದ ಕಡಲತೀರದಲ್ಲಿ ಮಂಗಳವಾರ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.</p></div>

ಕಾರವಾರ ತಾಲ್ಲೂಕಿನ ದೇವಬಾಗದ ಕಡಲತೀರದಲ್ಲಿ ಮಂಗಳವಾರ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.

   

ಕಾರವಾರ: ತಾಲ್ಲೂಕಿನ ದೇವಬಾಗದ ಕಡಲತೀರದಲ್ಲಿ ಮಂಗಳವಾರ 47 ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.

ಕಡಲತೀರದಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆ ಮೊಟ್ಟೆಗಳಿಂದ ಹೊರಗಡೆ ಬಂದ ಈ ವರ್ಷದ ಮೊದಲ ಕಡಲಾಮೆ ಮರಿಗಳಾಗಿದ್ದವು. ಪುಟ್ಟ ಪುಟ್ಟ ಮರಿಗಳು ಸಮುದ್ರ ಸೇರುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವರು ಸಾಕ್ಷಿಯಾದರು.

ADVERTISEMENT

ಮೊಟ್ಟೆ ಸಂರಕ್ಷಣೆಯ ಗೂಡುಗಳಿಂದ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆಯುತ್ತಿದ್ದಂತೆ ಅವುಗಳ ಚಿನ್ನಾಟ ವೀಕ್ಷಿಸಲು ಮಕ್ಕಳು, ವಿದ್ಯಾರ್ಥಿಗಳು ಕುತೂಹಲ ಭರಿತರಾಗಿ ಗಮನಿಸುತ್ತಿದ್ದರು. ಒಂದೊಂದೇ ಮರಿಗಳನ್ನು ಸುರಕ್ಷಿತವಾಗಿ ಬುಟ್ಟಿಯಿಂದ ಹೊರಕ್ಕೆ ತೆಗೆದು ಮರಳಿನ ಮೇಲೆ ಇಡುತ್ತಿದ್ದಂತೆ ಅವು ಸಮುದ್ರದತ್ತ ಓಡುತ್ತ ಸಾಗಿದ್ದವು.

‘ಈರೆಗೆ ಒಟ್ಟು 26 ಕಡಲಾಮೆ ಗೂಡುಗಳನ್ನು ಪತ್ತೆ ಮಾಡಲಾಗಿದ್ದು, 95 ಮೊಟ್ಟೆಗಳನ್ನು ಸಂರಕ್ಷಣೆ ಮಾಡಿಡಲಾಗಿದೆ. ಮೊಟ್ಟೆ ಇಟ್ಟ 53 ದಿನಕ್ಕೆ ಮರಿಗಳು ಹೊರಬಂದಿವೆ’ ಎಂದು ಎಸಿಎಫ್ ಜಯೇಶ್ ಕೆ.ಸಿ ಮಾಹಿತಿ ನೀಡಿದರು.

ಚಿತ್ತಾಕುಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ತಾಂಡೇಲ, ಡಿಸಿಎಫ್ ಸಿ. ರವಿಶಂಕರ, ಆರ್.ಎಫ್.ಒ ಗಜಾನನ ನಾಯ್ಕ, ಭವ್ಯಾ ನಾಯ್ಕ, ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ಪಿ.ಆರ್. ನಾಯ್ಕ, ಕಡಲಜೀವಶಾಸ್ತ್ರಜ್ಞ ಶಿವಕುಮಾರ ಹರಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.