ದಾಂಡೇಲಿ: ತಾಲ್ಲೂಕಿನ ಕೇಗದಾಳ ಗ್ರಾಮದ ವ್ಯಕ್ತಿ ಮೇಲೆ ಎರಡು ಕರಡಿಗಳು ದಾಳಿ ಮಾಡಿ ಗಾಯಗೊಳಿಸಿದೆ ಘಟನೆ ಶನಿವಾರ ಬೆಳಗ್ಗೆ ಜಾವ ನಡೆದಿದೆ.
ಡೊಮಿಂಗ್ ಜೆಜೇಸೈ(56) ಎನ್ನುವರು ದಾಳಿಗೆ ಒಳಗಾದ ವ್ಯಕ್ತಿ. ತಲೆ, ಬಲಗೈ ಹಾಗೂ ಎಡಗಾಲಿಗೆ, ತೀವ್ರ ಗಾಯವಾಗಿದೆ.
ಹೊಲದಲ್ಲಿ ಕಾವಲು ಕಾಯುತ್ತಿದ್ದ ಸಮಯದಲ್ಲಿ ಏಕಾಏಕಿ ಎರಡು ಕರಡಿ ದಾಳಿ ಮಾಡಿದ್ದು, ಒಂದು ಕರಡಿಯೊಂದಿಗೆ ಗುದ್ದಾಟ ನಡೆಸಿದ ನಂತರ ಇನ್ನೊಂದು ಕರಡಿ ದಾಳಿ ಮಾಡಿದೆ ಎಂದು ಗಾಯಾಳು ತಿಳಿಸಿದ್ದಾರೆ.
ನಿತ್ರಾಣಗೊಂಡಿದ್ದ ಅವರನ್ನು ಸ್ಥಳೀಯರು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ.
ಕುಳಗಿ ಆರ್.ಎಫ್.ಒ ಸಾಗರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ದಾಳಿಗೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.