ADVERTISEMENT

ಕಾರವಾರ ಜಿಲ್ಲೆಯಲ್ಲಿ ಆರಕ್ಕೇರಿದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 13:46 IST
Last Updated 28 ಮಾರ್ಚ್ 2020, 13:46 IST
ಕೋವಿಡ್ 19 ಸೋಂಕಿತರನ್ನು ಕಾರವಾರದ ‘ಐಎನ್ಎಸ್ ಪತಂಜಲಿ’ ಆಸ್ಪತ್ರೆಗೆ ಕರೆದುಕೊಂಡು ಬರಲು ಸಿದ್ಧತೆ ಮಾಡುತ್ತಿರುವುದು
ಕೋವಿಡ್ 19 ಸೋಂಕಿತರನ್ನು ಕಾರವಾರದ ‘ಐಎನ್ಎಸ್ ಪತಂಜಲಿ’ ಆಸ್ಪತ್ರೆಗೆ ಕರೆದುಕೊಂಡು ಬರಲು ಸಿದ್ಧತೆ ಮಾಡುತ್ತಿರುವುದು   

ಕಾರವಾರ: ಭಟ್ಕಳದಲ್ಲಿ ಮತ್ತೆ ಮೂವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಶನಿವಾರ ಆರಕ್ಕೇರಿದೆ.

ಭಟ್ಕಳದಲ್ಲಿ ಶುಕ್ರವಾರದವರೆಗೆ 67 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅವುಗಳಲ್ಲಿ 52 ಜನರ ವರದಿಗಳು ಬರಬೇಕಿದ್ದು, ಒಂಬತ್ತು ಮಂದಿಗೆ ಸೋಂಕು ತಗುಲಿಲ್ಲ ಎಂದು ಗೊತ್ತಾಗಿದೆ. ಕುಮಟಾ ಮತ್ತು ಅಂಕೋಲಾದ ತಲಾ ಒಬ್ಬರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 54 ಜನರ ಗಂಟಲುದ್ರವದ ಮಾದರಿಯ ವರದಿ ಬರಬೇಕಿದೆ.

ಜಿಲ್ಲೆಯಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಆಶಾ, ಅಂಗನವಾಡಿ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿಸಮೀಕ್ಷೆ ನಡೆಸಲಿದ್ದಾರೆ.

ADVERTISEMENT

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಜ್ವರ ಅಥವಾ ಇನ್ಯಾವುದೇ ಆರೋಗ್ಯ ಸಮಸ್ಯೆಗಳು ಇರುವವರು, ಇತ್ತೀಚಿಗೆ ವಿದೇಶ ಪ್ರಯಾಣ ಮಾಡಿದವರು,ಜಿಲ್ಲೆಗೆ ರಾಜ್ಯದ ಹಾಗೂ ದೇಶದ ಇತರ ಭಾಗಗಳಿಂದಇತ್ತೀಚೆಗೆ ಬಂದವರ ಮಾಹಿತಿಯನ್ನು ಸಿಬ್ಬಂದಿ ಸಂಗ್ರಹಿಸಲಿದ್ದಾರೆ. ಇದರಿಂದ ಈಗಿನ ಸ್ಥಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಜ್ವರದಿಂದ ಬಳಲುತ್ತಿರುವವರನ್ನುಪ್ರಾಥಮಿಕ ಪರಿಶೀಲನೆಗೆ ಒಳಪಡಿಸಿ ಫೀವರ್ ಕ್ಲಿನಿಕ್‌ಗೆ ಸ್ಥಳಾಂತರಿಸಲಾಗುವುದು. ವಿದೇಶಗಳಿಂದ ಬಂದವರನ್ನು ದಿನವೂ ಪರಿಶೀಲನೆಗೆ ಒಳಪಡಿಸಲಾಗುವುದು. ಸಮೀಕ್ಷೆಗೆ ಬರುವ ಸಿಬ್ಬಂದಿಗೆ ನಾಗರಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.