ಕಾಡುದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತ, ಚಕ್ಕಡಿ ಗಾಡಿಯಲ್ಲಿ ಸರಂಜಾಮು ಹೇರಿಕೊಂಡು ಬರುತ್ತಿರುವ ಇವರೆಲ್ಲ ಬರಗಾಲದಿಂದ ಗುಳೇ ಹೊರಟವರಲ್ಲ. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ಉಳವಿಯ ಚೆನ್ನಬಸವೇಶ್ವರ ರಥೋತ್ಸವಕ್ಕೆ ಬರುತ್ತಿರುವ ಭಕ್ತರು. ಜೊಯಿಡಾದ ದಟ್ಟ ಕಾಡಿನ ನಡುವೆ ಇರೋ ಶರಣರ ತಪೋಭೂಮಿಯಲ್ಲಿ ಇದೇ ಮಾರ್ಚ್ 24 ರಂದು ಅದ್ದೂರಿ ರಥೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.