
ಪ್ರಜಾವಾಣಿ ವಾರ್ತೆ
ಬಂಧನ
(ಪ್ರಾತಿನಿಧಿಕ ಚಿತ್ರ)
ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಮಡಗಾಂವ್‌ನಿಂದ ಭಟ್ಕಳಕ್ಕೆ ದಾಖಲೆಗಳಿಲ್ಲದೆ ಅಮೆರಿಕದ ಕರೆನ್ಸಿ ನೋಟುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ, ಭಟ್ಕಳದ ನಿವಾಸಿ ರುಕ್ಸುದ್ದೀನ್ ಸುಲ್ತಾನ್ ಬಾಷಾ (62) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಷಾ ಸ್ಕೂಟರ್‌ನಲ್ಲಿ ತಂದು ಸ್ಥಳೀಯರಾದ ಕಪ್ಪಾ ಮುಜೀಬ್ ಅವರಿಗೆ ನೀಡಲು ಪ್ರಯತ್ನಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. 100 ಡಾಲರ್ ಮುಖಬೆಲೆ 14 ನೋಟು, 50 ಡಾಲರ್ ಮುಖಬೆಲೆಯ 156 ನೋಟು ಸೇರಿ ಒಟ್ಟಾರೆ ₹ 8 ಲಕ್ಷಮೌಲ್ಯದ ಹಣ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.