ADVERTISEMENT

ವಿಧುಶೇಖರ ಭಾರತೀ ಸ್ವಾಮೀಜಿ ಗೋಕರ್ಣಕ್ಕೆ ಮೇ 24ರಂದು

​ಪ್ರಜಾವಾಣಿ ವಾರ್ತೆ
Published 20 ಮೇ 2025, 12:22 IST
Last Updated 20 ಮೇ 2025, 12:22 IST
ಗೋಕರ್ಣದಲ್ಲಿ ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿಯವರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಂಘಟಕರು ಬಿಡುಗಡೆ ಮಾಡಿದರು
ಗೋಕರ್ಣದಲ್ಲಿ ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿಯವರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಂಘಟಕರು ಬಿಡುಗಡೆ ಮಾಡಿದರು   

ಗೋಕರ್ಣ: ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಮೇ 24ರಂದು ಗೋಕರ್ಣಕ್ಕೆ ಆಗಮಿಸಲಿದ್ದು, 26ರವರೆಗೆ ಇಲ್ಲಿಯೇ ಇರುವರು’ ಶಿವಸಂಕಲ್ಪಂ ಸಂಸ್ಥೆಯ ಗಣಪತಿ ಹಿರೇ ತಿಳಿಸಿದ್ದಾರೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಯಂಗ್ ಸ್ಟಾರ್ ಕ್ಲಬ್ ಮತ್ತು ಶಿವಸಂಕಲ್ಪಂ ಹಾಗೂ ಊರ ನಾಗರಿಕರ ಮನವಿಯ ಮೇರೆಗೆ ಶ್ರೀಗಳು ಇಲ್ಲಿ ಬರಲಿದ್ದಾರೆ’ ಎಂದು ತಿಳಿಸಿದರು.

‘24ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಮೇ 25ರಂದು ಬೆಳಿಗ್ಗೆ 9.40ರ ಮಿಥುನ ಲಗ್ನದ ಮುಹೂರ್ತದಲ್ಲಿ ಗಾಯತ್ರೀ ಮೂರ್ತಿ ಪ್ರತಿಷ್ಠಾನೆ ಮತ್ತು ಶಿಖರ ಪ್ರತಿಷ್ಠಾಪನೆ ಸ್ವಾಮೀಜಿ ನೆರವೇರಲಿದೆ. 26ರಂದು ಮಹಾಗಣಪತಿ, ಮಹಾಬಲೇಶ್ವರ ಮತ್ತು ಪಾರ್ವತಿಯ ಪೂಜೆಯನ್ನು ಸ್ವಾಮೀಜಿ ನೆರವೇರಿಸಲಿದ್ದಾರೆ’ ಎಂದರು.

ADVERTISEMENT

‘24ರಂದು ಸಂಜೆ ಗೋಕರ್ಣಕ್ಕೆ ಪುರಪ್ರವೇಶ ಮಾಡಲಿದ್ದು, ರಥಬೀದಿಯ ವೆಂಕಟರಮಣ ದೇವಸ್ಥಾನದಿಂದ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಗುವುದು. ವೇದಘೋಷ ಮತ್ತು ಪಂಚವಾದ್ಯಗಳೊಂದಿಗೆ ಮಹಾಬಲೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಶ್ರೀಗಳ ಪಾದಪೂಜೆ, ಭಿಕ್ಷಾಸೇವೆ ಸಲ್ಲಿಸಲು ಭಕ್ತರಿಗೆ ಅವಕಾಶವಿದೆ’ ಎಂದು ಮಾಹಿತಿ ನೀಡಿದ್ದಾರೆ.

ಯಂಗ್ ಸ್ಟಾರ್ ಕ್ಲಬ್‌ನ ಗಣೇಶ ಮೂಳೆ, ಮಹೇಶ ಹಿರೇಗಂಗೆ, ಗಣಪತಿ ಅಡಿ, ಸಾಮಾಜಿಕ ಕಾರ್ಯಕರ್ತರಾದ ಮಹೇಶ ಶೆಟ್ಟಿ, ಚಂದ್ರಕಾಂತ ಶೆಟ್ಟಿ, ಅಮಿತ ನಾಡಕರ್ಣಿ, ಪ್ರಕಾಶ ಗೌಡ, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷೀಶ ಗೌಡ, ಶಿವಸಂಕಲ್ಪಂದ ವೇ. ಪರಮೇಶ್ವರ ಪ್ರಸಾದ ರಮಣಿ, ಗಣಪತಿ ಉಪಾಧ್ಯಾಯ, ನಾಗರಾಜ ಉಪಾಧ್ಯಾಯ ಇದ್ದರು.

ವಿಧುಶೇಖರ ಭಾರತೀ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.