ADVERTISEMENT

ಆಂಗ್ಲ ಮಾಧ್ಯಮ ವಿಭಾಗಕ್ಕೆ ಸಹಮತ

ತೋಡೂರಿನ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ: ಗ್ರಾಮಸ್ಥರ ಒಮ್ಮತದ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಮೇ 2020, 13:35 IST
Last Updated 21 ಮೇ 2020, 13:35 IST
ಕಾರವಾರ ತಾಲ್ಲೂಕಿನ ತೋಡೂರು ಕುವೆಂಪು ಶತಮಾನೋತ್ಸವ ಮಾದರಿ ಶಾಲೆ
ಕಾರವಾರ ತಾಲ್ಲೂಕಿನ ತೋಡೂರು ಕುವೆಂಪು ಶತಮಾನೋತ್ಸವ ಮಾದರಿ ಶಾಲೆ   

ಕಾರವಾರ: ತಾಲ್ಲೂಕಿನ ತೋಡೂರಿನ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿಈ ವರ್ಷದಿಂದ ಪಬ್ಲಿಕ್ ಸ್ಕೂಲ್ (ಆಂಗ್ಲಮಾಧ್ಯಮ ವಿಭಾಗ) ಆರಂಭಿಸಬೇಕು. ಇದರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದಾರೆ.

ಶಾಲೆಯ ಸಭಾಭವನದಲ್ಲಿ ಗುರುವಾರ ಅಂತರ ಕಾಯ್ದುಕೊಂಡು ಸಭೆ ನಡೆಸಿ, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕರುಣಾ ನಾಯ್ಕ ಮಾತನಾಡಿ, ‘ಗ್ರಾಮದಿಂದ ನಿತ್ಯವೂ ಹಲವು ವಿದ್ಯಾರ್ಥಿಗಳು ಆಂಗ್ಲಮಾಧ್ಯಮ ವ್ಯಾಸಂಗಕ್ಕೆಬೇರೆಊರುಗಳಿಗೆ ಪ್ರಯಾಣಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆಪ್ರಯಾಣದ ಅನಿವಾರ್ಯತೆ ಹಾಗೂ ಪಾಲಕರಿಗೆಹಣಕಾಸು ಹೊರೆಯಾಗುತ್ತಿದೆ. ಪಬ್ಲಿಕ್ ಶಾಲೆ ಆರಂಭವಾದರೆ ಈ ಸಂಕಷ್ಟ ತಪ್ಪಲಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯ ಗಜಾನನ ಬನಾರೆ ಮಾತನಾಡಿ, ‘ತೋಡೂರು ಪುನರ್ವಸತಿಪ್ರದೇಶದಲ್ಲಿಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ.ಹಾಗಾಗಿ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಆಂಗ್ಲಮಾಧ್ಯಮ ವಿಭಾಗ ಆರಂಭವಾದರೆ ನೆರೆಹೊರೆಯಗ್ರಾಮಗಳ ಪಾಲಕರಿಗೂ ತೊಂದರೆ ತಪ್ಪಲಿದೆ’ ಎಂದರು.

‘ಇಲ್ಲಿ ಆಂಗ್ಲಮಾಧ್ಯಮ ವಿಭಾಗ ಆರಂಭಿಸುವುದನ್ನುಆಕ್ಷೇಪಿಸುವವರುತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮದ ಶಾಲೆಗೆ ಕಳುಹಿಸುತ್ತಿರುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಸಾವಿರಾರು ಜನರಿಗೆ ಅನುಕೂಲ ಆಗುವ ಸಂದರ್ಭದಲ್ಲಿ ಅದಕ್ಕೆ ಅಡ್ಡಗಾಲು ಹಾಕಬಾರದು’ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ಪೂರ್ಣಿಮಾ ಮಹೇಕರ್ ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಮೇತ್ರಿ ಮಾತನಾಡಿ, ‘ಶಾಲೆಯಲ್ಲಿ ಆಂಗ್ಲಮಾಧ್ಯಮ ವಿಭಾಗ ಆರಂಭಿಸಲು ಶಿಕ್ಷಣ ಇಲಾಖೆಯಿಂದ ಪ್ರಸ್ತಾವ ಬಂದಾಗಲೇ ಒಪ್ಪಿಗೆ ನೀಡಲಾಗಿತ್ತು.ಈ ವರ್ಷದಿಂದಲೇ ತರಗತಿಗಳು ಆರಂಭವಾದರೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

‘ವಸತಿ ಸೌಕರ್ಯವನ್ನೂ ನೀಡಿ’:‘ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಆಂಗ್ಲಮಾಧ್ಯಮ ವಿಭಾಗ ಆರಂಭಿಸುವಂತೆ ಕಳೆದ ವರ್ಷವೇ ಶಿಕ್ಷಣ ಇಲಾಖೆಯನ್ನುಆಗ್ರಹಿಸಿದ್ದೆವು. ಈಗ ಅನುಮತಿ ನೀಡಲು ಸಿದ್ಧತೆ ನಡೆದಿರುವುದು ಖುಷಿಯ ವಿಚಾರ. ಇದಕ್ಕೆ ಅಗತ್ಯವಾದ ಸಹಕಾರವನ್ನೂ ಗ್ರಾಮದಿಂದ ನೀಡಲಾಗುವುದು. ಹಲವು ವರ್ಷಗಳಿಂದ ಈ ಕಾಲೊನಿಗೆ ಬಿ.ಸಿ.ಎಂವಸತಿಸೌಕರ್ಯ ನೀಡುವಂತೆ ಕೇಳುತ್ತಿದ್ದೇವೆ. ಸರ್ಕಾರಇದನ್ನು ಈಡೇರಿಸಬೇಕು’ ತೋಡೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಂದ್ರಕಾಂತ ಚಿಂಚಣಕರ್ಒತ್ತಾಯಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಜನಾರ್ದನ ಜಿ.ನಾಯ್ಕ, ವಿಮಲಾ ಆಗೇರ್, ಮಾನಸಾ ನಾಯ್ಕ, ಪ್ರಮುಖರಾದ ಗಣೇಶ ನಾಡರ್, ಮಂಜುನಾಥ ನಾಯ್ಕ, ಪೇರು ಗೌಡ, ಸಂತೋಷ ಗುನಗಿ, ರಾಜೇಶ ನಾಯ್ಕ, ಮೋಹನ ಗೌಡ, ದೇವಿಕಾ ನಾಯ್ಕ, ಶಂಕರ ಗೌಡ, ಸುರೇಶ ಗೌಡ, ಸೋನಿಯಾ ಗುನಗಿ, ಶಶಿಕಲಾ ಗೌಡಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.