ADVERTISEMENT

ವಾಲಿಬಾಲ್: ವಿಜಯದ ನಗೆ ಬೀರಿದ ಚಿಕ್ಕೋಡಿಯ ಆಟಗಾರರು

ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:29 IST
Last Updated 8 ಅಕ್ಟೋಬರ್ 2024, 14:29 IST
ಸಿದ್ದಾಪುರ ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದ 17ವರ್ಷ ವಯೋಮಿತಿಯಲ್ಲಿ ಚಿಕ್ಕೋಡಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಸ್ವೀಕರಿಸಿದರು
ಸಿದ್ದಾಪುರ ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದ 17ವರ್ಷ ವಯೋಮಿತಿಯಲ್ಲಿ ಚಿಕ್ಕೋಡಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಸ್ವೀಕರಿಸಿದರು   

ಸಿದ್ದಾಪುರ: ಪಟ್ಟಣದ ಐತಿಹಾಸಿಕ ನೆಹರು ಮೈದಾನದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾವಳಿ ಮಂಗಳವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ (ಪ್ರಥಮ), ಹಾವೇರಿ ಜಿಲ್ಲೆ (ದ್ವಿತೀಯ), ಬೆಳಗಾವಿ ಜಿಲ್ಲೆ (ತೃತೀಯ), ಬಾಲಕಿಯರ ವಿಭಾದಲ್ಲಿ ಗದಗ ಜಿಲ್ಲೆ (ಪ್ರಥಮ), ಹಾವೇರಿ ಜಿಲ್ಲೆ (ದ್ವಿತೀಯ), ಬಾಗಲಕೋಟೆ ಜಿಲ್ಲೆ(ತೃತೀಯ) ಸ್ಥಾನ ಪಡೆಯಿತು.

17ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (ಪ್ರಥಮ), ಶಿರಸಿ ಶೈಕ್ಷಣಿಕ ಜಿಲ್ಲೆ (ದ್ವಿತೀಯ), ಉತ್ತರ ಕನ್ನಡ ಜಿಲ್ಲೆ (ಕಾರವಾರ) (ತೃತೀಯ), ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಜಿಲ್ಲೆ (ಪ್ರಥಮ), ಗದಗ ಜಿಲ್ಲೆ (ದ್ವಿತೀಯ) ಹಾಗೂ ಧಾರವಾಡ ಜಿಲ್ಲೆ(ತೃತೀಯ) ಸ್ಥಾನ ಪಡೆದುಕೊಂಡವು.

ADVERTISEMENT

ಬಾಲಕರ ವಿಭಾಗದ 17 ವರ್ಷ ವಯೋಮಿತಿಯ ಪಂದ್ಯದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಚಿಕ್ಕೋಡಿ ಜಿಲ್ಲೆ ಆಟಗರರು ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ಚಿಕ್ಕೋಡಿಯ ಆಟಗಾರರು ಸಾಂಘೀಕ ಹೋರಾಟದಿಂದಾಗಿ ವಿಜಯದ ನಗೆ ಬೀರಿದರು.

ಹೆಸ್ಕಾಂ ತಾಲ್ಲೂಕು ಅಧಿಕಾರಿ ನಾಗರಾಜ ಪಾಟೀಲ್, ಸಿದ್ದಾಪುರ ಬಿಇಒ ಎಂ.ಎಚ್.ನಾಯ್ಕ, ಶಿರಸಿ ಬಿಇಒ ನಾಗರಾಜ, ಡಾ.ನಾಗರಾಜ ನಾಡಿಗೇರ , ದತ್ತಾತ್ರೇಯ ನಾಯ್ಕ  ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಲೋಕೇಶ ನಾಯ್ಕ, ಪ್ರವೀಣ ಕುರುಬರ್, ವಿಜಯಕ್ಷ್ಮೀ, ರಾಜೇಂದ್ರ ಕಾಂಬಳೆ, ಗೋಪಾಲ ನಾಯ್ಕ, ಗಣೇಶ ಶಿರಸಿ, ಮಾಧವ ನಾಯ್ಕ ಹಾಗೂ ವಿವಿಧ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ವಿ.ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.