ADVERTISEMENT

ಭಟ್ಕಳ: ಸಮುದ್ರಕ್ಕೆ ಜಿಗಿದು ಈಜಿದ ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 13:40 IST
Last Updated 9 ಮಾರ್ಚ್ 2024, 13:40 IST
<div class="paragraphs"><p>ಸಮುದ್ರಕ್ಕೆ ಜಿಗಿದು ಈಜಿದ ಸಚಿವ ಮಂಕಾಳ ವೈದ್ಯ</p></div>

ಸಮುದ್ರಕ್ಕೆ ಜಿಗಿದು ಈಜಿದ ಸಚಿವ ಮಂಕಾಳ ವೈದ್ಯ

   

ಭಟ್ಕಳ: ತಾಲ್ಲೂಕಿನ ಬೆಳಕೆ ಸಮೀಪ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಸಾಲು ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲು ತೆರಳಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಸಮುದ್ರಕ್ಕೆ ಜಿಗಿದು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಈಜಿದರು.

ಖಾಸಗಿ ದೋಣಿಯಲ್ಲಿ ತೆರಳಿದ್ದ ಅವರು ಕೃತಕ ಬಂಡೆಸಾಲು ಸಮುದ್ರಕ್ಕೆ ಬಿಡುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ದಡದಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರಕ್ಕೆ ಜಿಗಿದರು. ಶವಾಸನದಲ್ಲಿ ಕೆಲ ನಿಮಿಷ ತೇಲಿದ್ದ ಅವರು ಬಳಿಕ ಕೆಲ ಹೊತ್ತು ಈಜಿದರು‌.

ADVERTISEMENT

'ಸಮುದ್ರದಲ್ಲಿ ಈಜದೆ ಹಲವು ಸಮಯವಾಗಿತ್ತು. ಕೃತಕ ಬಂಡೆಸಾಲು ಅಳವಡಿಸುವಂತ ಯೋಜನೆಗೆ ಚಾಲನೆ ನೀಡುವ ಅವಕಾಶ ಸಿಕ್ಕ ವೇಳೆ ಈಜಿ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದೇನೆ' ಎಂದು ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.