ADVERTISEMENT

29ರಿಂದ ತರಗತಿಗಳ ಪುನರಾರಂಭ: ಶಾಲೆಗಳಲ್ಲಿ ನೀರಿನ ಸಮಸ್ಯೆಯ ಆತಂಕ

ಜೊಯಿಡಾ

​ಪ್ರಜಾವಾಣಿ ವಾರ್ತೆ
Published 28 ಮೇ 2019, 12:23 IST
Last Updated 28 ಮೇ 2019, 12:23 IST
ಜೊಯಿಡಾ ತಾಲ್ಲೂಕಿನ ಕೊಂದರ ಶಾಲೆಯ ವಿದ್ಯಾರ್ಥಿಗಳು ಶಾಲಾ ಆವರಣವನ್ನು ಮಂಗಳವಾರ ಸ್ವಚ್ಛಗೊಳಿಸಿದರು
ಜೊಯಿಡಾ ತಾಲ್ಲೂಕಿನ ಕೊಂದರ ಶಾಲೆಯ ವಿದ್ಯಾರ್ಥಿಗಳು ಶಾಲಾ ಆವರಣವನ್ನು ಮಂಗಳವಾರ ಸ್ವಚ್ಛಗೊಳಿಸಿದರು   

ಜೊಯಿಡಾ:ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷವು ಮೇ 29ರಂದು ಪ್ರಾರಂಭವಾಗಿದೆ.ಇದಕ್ಕಾಗಿ ಶಿಕ್ಷಕರು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ತಾಲ್ಲೂಕಿನಬಹುತೇಕ ಶಾಲೆಗಳಿಗೆಶಿಕ್ಷಕರು ಮಂಗಳವಾರವೇ ತೆರಳಿದ್ದರು. ವಿದ್ಯಾರ್ಥಿಗಳು ಹಾಗೂ ಅಡುಗೆ ಸಹಾಯಕರ ನೆರವಿನೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡರು.

ಈ ಬಾರಿತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ ಶಾಲೆಗಳಿಗೂ ಗಂಭೀರವಾಗಿ ಕಾಡುವ ಆತಂಕ ಎದುರಾಗಿದೆ.ತಾಲ್ಲೂಕಿನಲ್ಲಿ 170 ಶಾಲೆಗಳಿದ್ದು, ಹೆಚ್ಚಿನ ಕಡೆಗಳಲ್ಲಿ ನೈಸರ್ಗಿಕವಾಗಿ ಹರಿಯುವ ನೀರನ್ನು ಪೈಪ್ ಮೂಲಕ ತಂದು ಬಳಸಲಾಗುತ್ತಿದೆ.

ಈಗ ಝರಿಯ ಮೂಲಗಳು ಬತ್ತಿವೆ. ಕೆಲವುಶಾಲೆಗಳಲ್ಲಿರುವ ಬಾವಿಗಳು ಹಾಗೂ ಕೊಳವೆ ಬಾವಿಗಳೂ ಒಣಗಿವೆ.ಇದರಿಂದಬಿಸಿಯೂಟಕ್ಕೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.ಬಹುತೇಕ ಶಾಲೆಗಳಲ್ಲಿಶೌಚಾಲಯಗಳಿವೆ. ಆದರೆ, ಅಲ್ಲಿಯೂ ನೀರಿನ ಕೊರತೆ ಕಾಣಿಸಿಕೊಳ್ಳಬಹುದು. ಹಾಗಾಗಿ ಪರ್ಯಾಯ ವ್ಯವಸ್ಥೆಯೇನು ಎಂಬ ಚಿಂತೆಶಾಲಾಡಳಿತದ್ದಾಗಿದೆ.

ADVERTISEMENT

‘ತಾಲ್ಲೂಕಿನ ಶೇ 50ಕ್ಕಿಂತ ಹೆಚ್ಚು ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಇದಕ್ಕಾಗಿ ಏ.15ರಂದು ಎಲ್ಲ ಶಿಕ್ಷಕರ ಸಭೆನಡೆಸಲಾಗಿತ್ತು. ಗ್ರಾಮ ಪಂಚಾಯ್ತಿ ಅಥವಾ ತಾಲ್ಲೂಕು ಆಡಳಿತದಿಂದಗ್ರಾಮಗಳಿಗೆ ಪೂರೈಸುವ ನೀರನ್ನು ಶಾಲೆಗಳಿಗೂ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಶಾಲೆಯ ಪ್ರಾರಂಭದ ದಿನ ಎಲ್ಲ ಶಾಲೆಗಳಲ್ಲೂ ಬಿಸಿಯೂಟದ ಜೊತೆಗೆ ಶುದ್ಧ ಕುಡಿಯುವ ನೀರನ್ನು ಮಕ್ಕಳಿಗೆ ನೀಡುವಂತೆಯೂ ನಿರ್ದೇಶನ ನೀಡಲಾಗಿದೆ’ ಎಂದು ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎ.ರೆಹಮಾನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.