ADVERTISEMENT

ಡಿ.ಕೆ.ಶಿ, ಸಿದ್ದರಾಮಯ್ಯ ಮೌನ ವಹಿಸಿರುವುದು ಯಾಕೆ: ಸಚಿವ ಕೋಟ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 12:18 IST
Last Updated 9 ನವೆಂಬರ್ 2022, 12:18 IST
   

ಕಾರವಾರ: ‘ಕಾಂಗ್ರೆಸ್‌ ಪಕ್ಷದ ದೊಡ್ಡ ಹುದ್ದೆಯಲ್ಲಿರುವ ಸತೀಶ ಜಾರಕಿಹೊಳಿ ಅವರ ಹೇಳಿಕೆಯು ಖಂಡನೀಯವಾಗಿದೆ. ಅವರು ಧರ್ಮದ ಅವಹೇಳನ ಮಾಡಿದಾಗ ಹಾಗೂ ಅದನ್ನು ಸರಿ ಎಂದು ಸಮರ್ಥಿಸಿಕೊಳ್ಳುವಾಗ, ಎಲ್ಲ ಧರ್ಮಗಳೂ ತಮಗೆ ಸಮಾನ ಎಂದು ಹೇಳುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಮೌನ ವಹಿಸಿರುವುದು ಯಾಕೆ? ಕನಿಷ್ಠ ತಪ್ಪಾಗಿದೆ ಎಂದು ಹೇಳಲು ಆಗದಷ್ಟು ಒರಟುತನವನ್ನು ಪ್ರದರ್ಶನ ಮಾಡುತ್ತಿದ್ದೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ಹಿಂದೂ ಧರ್ಮೀಯರಿಗೆ, ಸಮಾಜದ ಮಠ ಮಾನ್ಯಗಳಿಗೆ ನೋವಾಗಿದೆ. ನಿಮ್ಮ ಕಾರ್ಯಾಧ್ಯಕ್ಷರ ಮಾತಿಗೆ ಸಹಮತ ವ್ಯಕ್ತಪಡಿಸುತ್ತಿರಾ, ಖಂಡಿಸುತ್ತೀರಾ, ಕ್ರಮ ತೆಗೆದುಕೊಳ್ತೀರಾ, ಅವರಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿಸುತ್ತೀರಾ ಅಥವಾ ಅಸಹಾಯಕರಾಗಿದ್ದೀರಾ ಎಂದು ಸ್ಪಷ್ಟಪಡಿಸಿ’ ಎಂದರು.

‘ಸತೀಶ ಜಾರಕಿಹೊಳಿ ವಿರುದ್ಧ ಬಿ.ಜೆ.ಪಿ.ಯಿಂದ ದೂರು ನೀಡಲಾಗಿದೆ. ಕಾನೂನು ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.