ADVERTISEMENT

ಪ್ರಾಣಿ ಹತ್ಯೆ ಸಂಚು: ಮೂವರ ದಸ್ತಗಿರಿ, ಒಬ್ಬ ಪರಾರಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 9:03 IST
Last Updated 31 ಡಿಸೆಂಬರ್ 2025, 9:03 IST
ಆರೋಪಿತರು ಹಾಗೂ ಕಾಯಾ೯ಚರಣೆಯಲ್ಲಿ ಭಾಗವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು.
ಆರೋಪಿತರು ಹಾಗೂ ಕಾಯಾ೯ಚರಣೆಯಲ್ಲಿ ಭಾಗವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು.   

ಯಲ್ಲಾಪುರ: ವನ್ಯಪ್ರಾಣಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಮೂವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.

ಶಿರಸಿಯ ಸೋಂದಾ ಕ್ರಾಸ್‌ ನಿವಾಸಿಗಳಾದ ಹಸನ್‌ ಖಾನ್‌ ಇಬ್ರಾಹಿಂ ಖಾನ್‌ ಹಾಗೂ ಮುಜಿಬುರ್‌ ರೆಹಮಾನ್‌ ಅಬ್ದುಲ್‌ ಮುತಲಿಬ್‌ ಸಾಬ್‌ ಮತ್ತು ಸೋದೆಪೇಟೆಯ ಅಬ್ದುಲ್‌ ಜಬ್ಬಾರ ಹಬೀಬುರ ರೆಹಮಾನ್‌ ಸಾಬ ಇವರು ದಸ್ತಗಿರಿ ಆದವರು. ಹೆಗಡೆಕಟ್ಟಾದ ಅಬ್ದುಲ್‌ ಹನ್ನನ್‌ ಮಹಮ್ಮದ್‌ ಸಾಬ್‌ ತಲೆಮರೆಸಿಕೊಂಡಿದ್ದಾನೆ.

ʻಆರೋಪಿತರು ಶಿರಸಿ -ಯಲ್ಲಾಪುರ ರಾಜ್ಯ ಹೆದ್ದಾರಿಯ ತೂಕದಬೈಲ್‌ ಸಮೀಪ ಕಾರಿನಲ್ಲಿ ಬಂದೂಕು ಹಾಗೂ ಇತರ ಆಯುಧಗಳನ್ನು ತುಂಬಿಕೊಂಡು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದರು. ಮಂಚಿಕೇರಿ ವಲಯದ ಚಿಕ್ಕೊತ್ತಿ ಗ್ರಾಮದ ಅರಣ್ಯದಲ್ಲಿ ವನ್ಯಪ್ರಾಣಿ ಹತ್ಯೆಗೆ ಸಂಚು ರೂಪಿಸಿದ್ದರು. ಕಾರು ಮತ್ತು ಆಯುಧಗಳನ್ನು ಜಪ್ತಿ ಮಾಡಲಾಗಿದೆʼ ಎಂದು ಅರಣ್ಯ ಇಲಾಖೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.