ಶಿರಸಿ: ಸಂಸದ ಅನಂತಕುಮಾರ ಹೆಗಡೆ ಸಂಬಂಧಿ ಎಂದು ಸುಳ್ಳು ಹೇಳಿ ಮೈಸೂರಿನ ಮಹಿಳೆಯೊಬ್ಬರಿಗೆ ಹಣ ವಂಚಿಸಿದ ಶಿರಸಿ ಮೂಲದ ರೇಖಾ ಹೆಗಡೆ ಎಂಬುವವರ ವಿರುದ್ಧ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ರೇಖಾ ಅಲಿಯಾಸ್ ಮೈತ್ರಿ ಎಂಬ ಯುವತಿ ತಾನು ಸಂಸದರ ಹತ್ತಿರದ ಸಂಬಂಧಿ ಎಂದು ನಂಬಿಸಿ ₹4.50 ಲಕ್ಷ ಹಣ ವಂಚಿಸಿದ್ದಾಳೆ ಎಂದು ಮೈಸೂರಿನ ಮಂಜುಳಾ ಎಂಬುವವರು ಗಮನಕ್ಕೆ ತಂದಿದ್ದಾರೆ. ಸಂಸದರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ ಆರೋಪಿ ರೇಖಾ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಪ್ತಕಾರ್ಯದರ್ಶಿ ಸುರೇಶ್ ದೂರು ಸಲ್ಲಿಸಿದ್ದಾರೆ.
‘ವಂಚನೆಗೊಳಗಾದ ಮಹಿಳೆಯೂ ಮೈಸೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.