
ಕಾರವಾರ: ‘ಸ್ಪರ್ಧಾತ್ಮಕ ಯುಗದಲ್ಲಿ ಪುಟಾಣಿಗಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವು ಅತ್ಯಮೂಲ್ಯವಾಗಿದ್ದು, ಬಾಲ್ಯದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ’ ಎಂದು ಸಾಹಿತಿ ಅರವಿಂದ ಕರ್ಕಿಕೋಡಿ ಹೇಳಿದರು.
ಈಚೆಗೆ ಗೋಕರ್ಣ ಸಮೀಪದ ಸಣ್ಣಬಿಜ್ಜೂರಿನಲ್ಲಿರುವ ಲಿಟ್ಲ್ ಚಾಂಪ್ಸ್ ಕಿಂಡರ್ ಗಾರ್ಟನ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಗುಣಮಟ್ಟದ ಇಂಗ್ಲೀಷ್ ಶಿಕ್ಷಣವು ಇಂದಿನ ಅವಶ್ಯಕತೆಯಾಗಿದ್ದು, ಅದರೊಂದಿಗೆ ಮಾತೃಭಾಷೆ ಕನ್ನಡವನ್ನು ಅಚ್ಚುಕಟ್ಟಾಗಿ ಬರೆಯಲು, ಮಾತನಾಡಲು, ದಿನಪತ್ರಿಕೆ ಓದಲು ಮಕ್ಕಳಿಗೆ ಕಲಿಸುವುದರಿಂದ ಸಾಹಿತ್ಯದ ಅಭಿರುಚಿ ಹೆಚ್ಚಲು ಕಾರಣವಾಗುತ್ತದೆ’ ಎಂದರು.
ಕಾಂಗ್ರೆಸ್ ಮುಖಂಡ ಪ್ರದೀಪ ನಾಯಕ, ‘ಮಕ್ಕಳನ್ನು ಎಂಜಿನಿಯರ್ ಮತ್ತು ವೈದ್ಯರನ್ನಾಗಿಸುವ ಧಾವಂತದಲ್ಲಿ ಪಾಲಕರು ಅವರ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದಾರೆಂದು’ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ನಾಯಕ, ಗೋಕರ್ಣ ಬಿಜೆಪಿ ಮಂಡಲ ಅಧ್ಯಕ್ಷ ಗಣೇಶ ಪಂಡಿತ, ವರಪ್ರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಕುಮುದಾ ನಾಗರಾಜ ನಾಯ್ಕ, ಶಾಲೆಯ ಮುಖ್ಯ ಶಿಕ್ಷಕಿ ಪ್ರಜಿಶಾ ನಾಯರ ಪಾಲ್ಗೊಂಡಿದ್ದರು.
ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕಲ್ಪನಾ ನಾಯಕ, ಸಿಬಿಎಸ್‍ಇಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿ ಸಮ್ವಿತ್ ಗೋಕರ್ಣ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.